ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬುಧವಾರ ರಾಹುಲ್‌ಗಾಂಧಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಹಾಲ್‌ನಲ್ಲಿ ಕುಳಿತುಕೊಂಡ ಕೆಲ ವ್ಯಕ್ತಿಗಳು ಖಲಿಸ್ತಾನ್‌ಜಿಂದಾಬಾದ್‌ಎನ್ನುವ ಘೋಷಣೆಯನ್ನು ಕೂಗಿದ್ದಾರೆ. ಅದಲ್ಲದೆ, ಕೆಲವರು ಖಲಿಸ್ತಾನಿ ಧ್ವಜಗಳನ್ನೂ ಹಾರಿಸಿದ್ದಾರೆ. ಖಲಿಸ್ತಾನಿಗಳು ಈ ಆಟಾಟೋಪ ಮಾಡುವ ವೇಳೆ ರಾಹುಲ್‌ಗಾಂದಿ ಮಾತ್ರ ಸುಮ್ಮನೆ ನಗುತ್ತಾ ನಿಂತಿದ್ದರು. ಪ್ರತಿಕ್ರಿಯೆ ನೀಡಿದ ರಾಹುಲ್‌ಗಾಂಧಿ ದ್ವೇಷದ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕು ಎಂದು ಈ ವೇಳೆ ಅವರು ಹೇಳಿದ್ದಾರೆ.ಆದರೆ, ಎಲ್ಲೂ ಖಲಿಸ್ತಾನಿಗಳನ್ನು ಈ ಹಂತದಲ್ಲಿ ಟೀಕೆ ಮಾಡುವ ಮಾತನ್ನು ರಾಹುಲ್‌ಆಡಿಲ್ಲ.