ಭಾರತ್ ಜೋಡೋ ಪಾದಯಾತ್ರೆ ಯಶಸ್ಸಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಲವರು ರಾಹುಲ್‌ಗೆ ಪ್ರಶ್ನೆ ಕೇಳ್ತಿದ್ರು, ನಿಮಗೆ ಅಧಿಕಾರ ಬೇಕಿಲ್ಲ ಅಂದ ಮೇಲೆ ಯಾಕೆ ಪಾದಯಾತ್ರೆ ಎಂದು. ಅದಕ್ಕೆ ರಾಹುಲ್ ಗಾಂಧಿ ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಮನೆಯಲ್ಲಿ ನಾವು, ನಿಮ್ಮ ಮನೆಯಲ್ಲಿ ನೀವು ಖುಷಿ ಯಾಗಿರಬಹುದು. ಆದರೆ ನಾನು ನಮ್ಮ ಅಜ್ಜಿ, ತಂದೆಯನ್ನು ಕಳೆದುಕೊಂಡಿದ್ದೇನೆ. ಇಡೀ ದೇಶ ನೆಹರೂ ಅವರ ಕಾಲದಿಂದಲೂ ನಮ್ಮ ಕುಟುಂಬಕ್ಕೆ ಇಷ್ಟೊಂದು ಪ್ರೀತಿ ನೀಡಿದೆ. ಇದು ಮನೆಯಲ್ಲಿದ್ದರೇ ಸಿಗುತ್ತಿತ್ತಾ? ಹಾಗಾಗಿಯೇ ಈ ಪಾದಯಾತ್ರೆ ಮಾಡ್ತಿರೋದು. ಜನರ ಪರವಾಗಿ ನಡೆಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.