ರಾಹುಲ್‌ಗಾಂಧಿ ಸಂಧಾನ ವಿಫಲವಾಗಿದ್ದು, ಖರ್ಗೆ ಹೆಸರು ಮುಂದಿಟ್ಟು ಸಿದ್ದರಾಮಯ್ಯಗೆ ಚೆಕ್ ಮೇಟ್ ಕೊಟ್ಟ ಡಿಕೆಶಿ

ಇಂದು ರಾಹುಲ್‌ನಿವಾಸಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಬೆಂಬಲಿಗರ ಜೊತೆ ಸಿದ್ದರಾಮಯ್ಯ ಕಾರಿನಲ್ಲಿ ರಾಹುಲ್‌ನಿವಾಸದಿಂದ ತೆರಳಿದರು. ತೆರಳುವ ಸಂದರ್ಭದಲ್ಲಿ ಸಿದ್ದು ಬೆಂಬಲಿಗರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಭೇಟಿಯ ಬಳಿಕ ರಾಹುಲ್‌ನಿವಾಸಕ್ಕೆ ಡಿಕೆಶಿ ಆಗಮಿಸಿದರು. ಮಾತುಕತೆಯ ವೇಳೆ ಎಐಸಿಸಿಯ ಸಂಧಾನ ಸೂತ್ರಕ್ಕೆ ಒಪ್ಪದ ಡಿಕೆ ನನಗೆ ಸಿಎಂ ಪಟ್ಟ ಕೊಡಲೇಬೇಕೆಂದು ಪಟ್ಟು ಹಿಡಿದರು.ಚುನಾವಣೆಗೂ ಮೊದಲು ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆದ ಕಾರಣ ಅಧಿಕಾರಕ್ಕೆ ಏರಲು ಎಲ್ಲರ ಶ್ರಮವಿದೆ. ಕೊನೆಯ ಮೂರು ವರ್ಷ ನಾನು ಸಿಎಂ ಆಗಲು ಸಾಧ್ಯವಿಲ್ಲ. ಈಗಾಗಲೇ ಸಿದ್ದರಾಮಯ್ಯ ಒಂದು ಬಾರಿ ಮುಖ್ಯಮಂತ್ರಿ ಪಟ್ಟ ಏರಿದ್ದಾರೆ. ಈ ಬಾರಿ ನನಗೆ ಒಂದು ಅವಕಾಶ ನೀಡಿ. ಒಂದು ವೇಳೆ ನನಗೆ ಸಿಗದೇ ಇದ್ದರೆ ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಪಟ್ಟ ನೀಡಿ. ನೇರವಾಗಿ ಖಂಡಾತುಂಡವಾಗಿ ಹೇಳಿದ್ದಾರೆ.ಖರ್ಗೆ ಅವರಿಗೆ ಸಿಎಂ ಪಟ್ಟ ನೀಡಿದರೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಡಿಕೆಶಿ ರಾಹುಲ್‌ ಮುಂದೆ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ.ಡಿಕೆಶಿ ಹಟಕ್ಕೆ ಬಿದ್ದು ಪಟ್ಟು ಹಿಡಿಯುವುದನ್ನು ನೋಡಿ ಡಿಕೆ ಸುರೇಶ್ ಅವರನ್ನು ತನ್ನ ನಿವಾಸಕ್ಕೆ ರಾಹುಲ್‌ಕರೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ನೀಡಿದರೆ ನನಗೆ ಡಿಸಿಎಂ ಪಟ್ಟ ಬೇಡ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ನಾನು ಸರ್ಕಾರದ ಭಾಗವಾಗಿ ಇರಲ್ಲ. ಕೇವಲ ಶಾಸಕನಾಗಿಯೇ ಮುಂದುವರೆಯುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.ಸುಮಾರು ಒಂದೂವರೆ ಗಂಟೆಗಳ ರಾಹುಲ್‌ಸಂಧಾನ ಮಾಡಿದರೂ ಡಿಕೆ ಒಪ್ಪಲೇ ಇಲ್ಲ. ಸರಿಯಾದ ಸ್ಪಂದನೆ ಸಿಗದ ಕಾರಣ ರಾಹುಲ್‌ಗಾಂಧಿ ಸಂಧಾನ ವಿಫಲವಾಗಿದೆ. ಸಂಧಾನ ವಿಫಲವಾದ ಬೆನ್ನಲ್ಲೇ ಡಿಕೆ ಶಿವಕುಮಾರ್‌ನೇರವಾಗಿ ಖರ್ಗೆ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *