ಕಾಂಗ್ರೆಸ್‌ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ನಾನು ಪಕ್ಷವನ್ನು ತೊರೆದಿಲ್ಲ. ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ನನಗೆ ಅಪಾರ ಗೌರವವಿದೆ. ರಾಹುಲ್ ಗಾಂಧಿ ಅವರನ್ನು ಯಶಸ್ವಿ ನಾಯಕರನ್ನಾಗಿ ಮಾಡಲು ಕಾಂಗ್ರೆಸ್‌ನ ನಾಯಕರೂ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರೇ ಆಸಕ್ತಿ ತೋರಿಸಲಿಲ್ಲ. ಕಾಂಗ್ರೆಸ್‌ನ ಹಲವು ಸಭೆಗಳು ನಡೆದಿವೆ. ಆದರೆ ನನ್ನ ಒಂದೇ ಒಂದು ಸಲಹೆಯನ್ನೂ ಅವರು ತೆಗೆದುಕೊಂಡಿಲ್ಲ ಇಂದಿರಾಗಾಂಧಿ ಕುಟುಂಬ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರ ಮೇಲೂ ಗೌರವ ಇದೆ. ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ ಆದರೆ ಅವರು ರಾಜಕೀಯಕ್ಕೆ ಯೋಗ್ಯವಾದ ವ್ಯಕ್ತಿಯಲ್ಲ ನಾನು ವೈಯಕ್ತಿಕವಾಗಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಆಜಾದ್ ಶುಭ ಹಾರೈಸಿದರು.