ನಗರದ ಪ್ರಸಿದ್ಧ ರಿಯಲ್‌ಎಸ್ಟೇಟ್‌ಕಂಪನಿ ಮಾನ್ಯತಾ ಗ್ರೂಪ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಬೆಂಗಳೂರಿನ ರಿಚ್ಮಂಡ್‌ರೋಡ್‌ನಲ್ಲಿರುವ ಕೇಂದ್ರ ಕಚೇರಿ ಸೇರಿದಂತೆ ಸದಾಶಿವ ನಗರ ಮನೆ ಮೇಲೆಯೂ ದಾಳಿ ಮಾಡಿದೆ ಹಲವು ಕಡೆ ಇoದು ಮುಂಜಾನೆಯಿಂದಲೇ ದಾಳಿ ನಡೆದಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.