ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ಸಚಿವ ಸೋಮಣ್ಣ ಭೇಟಿ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್ ಅವರು, ಸಚಿವ ಸೋಮಣ್ಣ ಪರ ಬ್ಯಾಟಿಂಗ್ ನಡೆಸಿದರು. ಸಚಿವ ವಿ.ಸೋಮಣ್ಣ ಅವರು ಜೀವನದಲ್ಲಿ ಯಾವತ್ತಿಗೂ ರೌಡಿಗಳ ಸಹವಾಸ ಮಾಡಿಲ್ಲ. ರೌಡಿಗಳಿಂದ ಚುನಾವಣೆ ಗೆದ್ದಿಲ್ಲ. ಅವರು ಬಸವ ತತ್ವದಲ್ಲಿ ನಂಬಿಕೆ ಇಟ್ಟವರು. ಅಂತಹವರ ವಿರುದ್ಧ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಆದರೆ ಕಾಂಗ್ರೆಸ್ ಇದನ್ನ ದೊಡ್ಡದು ಮಾಡ್ತಿದೆ. ನಿತ್ಯ ಟ್ವೀಟ್ ಮಾಡ್ತಿದ್ದಾರೆ ಇದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಗೂಂಡಾಗಿರಿ ಹಿನ್ನೆಲೆಯಿದೆ. ಅದು ರೌಡಿಗಳನ್ನ ತಯಾರು ಮಾಡೋ ಕಾರ್ಖಾನೆಯಾಗಿದೆ. ಅವರು ಅಧಿಕಾರದಲ್ಲಿದ್ದಾಗ ಡಾನ್‌ಗಳು ಇದ್ದರು. ಈಗ ಯಾರು ಇಲ್ಲ. ನಮ್ಮದು ನೇರವಾದ ರಾಜಕೀಯ ಕೇಸರಿ ಶಾಲು ಹಾಕಿದ ಕೂಡಲೇ ಅವರು ಬಿಜೆಪಿ ಅವರು ಅಲ್ಲ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜೊತೆ ರೌಡಿಗಳು ನಿಂತಿರೋದು ನೂರಾರು ಫೋಟೋಗಳು ಇವೆ. ಕಾಂಗ್ರೆಸ್ ಪಕ್ಷದ್ದು ರೌಡಿಗಳ ಜಾತಕ. ಅದನ್ನ ಮೊದಲು ನೋಡಿಕೊಳ್ಳಲಿ ಅಂತ ಕಿಡಿಕಾರಿದರು. ಫೈಟರ್ ರವಿ ಪಕ್ಷ ಸೇರ್ಪಡೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜೊತೆ ಮಾತಾಡುತ್ತೇನೆ. ರೌಡಿ ಹಿನ್ನೆಲೆ, ಸಮಾಜಘಾತುಕವಾಗಿರೋದು ಕಂಡುಬಂದಲ್ಲಿ. ಅಂತಹವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.