ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದ ಬಂಡಾಯ ಬಿಸಿ ಕೂಡ ಹೆಚ್ಚಾಗಿದೆ. ಈಗಾಗಲೇ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೂರನೇ ಹಾಗೂ ಅಂತಿಮ ಪಟ್ಟಿ ಶೀಘ್ರದಲ್ಲೇ ಹೊರಬೀಳಲಿದೆ. ಇದರ ನಡುವ ಬಿಜೆಪಿ ಹೈಕಮಾಂಡ್ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಂಜಾಬ್‌ನ ಜಲಂಧರ ಕ್ಷೇತ್ರಕ್ಕೆ ನಡೆಯಲಿರುವ ಲೋಕಸಭಾ ಉಪಚುನಾವಣೆ ಹಾಗೂ ಒಡಿಶಾದ ಝಾರ್ಸುಗುಡ ವಿಧಾನಸಭಾ ಉಪ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. ಪಂಜಾಬ್ ಲೋಕಸಭಾ ಹಾಗೂ ಒಡಿಶಾನ ವಿಧಾನಸಭಾ ಚುನಾವಣೆ ಕೂಡ ಮೇ.10 ರಂದು ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರಕ್ಕೆ ಸರ್ದಾರ್ ಇಂದರ್ ಇಕ್ಬಾಲ್ ಸಿಂಗ್‌ಗೆ ಟಿಕೆಟ್ ನೀಡಿದೆ. ಇನ್ನು ಒಡಿಸಾದ ಝಾರ್ಸುಗುಡ ವಿಧಾನಸಭಾ ಕ್ಷೇತ್ರಕ್ಕೆ ತಂಕಧಾರ್ ತ್ರಿಪಾಠಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೀಗ ಕರ್ನಾಟಕ ಚುನಾವಣೆ ನಡುವೆ ಎರಡು ಉಪಚುನಾವಣೆಗೂ ಬಿಜೆಪಿ ತಯಾರಿ ನಡೆಸುತ್ತಿದೆ.