ವರ್ಗಾವಣೆ ದಂಧೆ: ಸದನದಲ್ಲಿ ಬೊಮ್ಮಾಯಿ-ಸಿಎಂ ನಡುವೆ ತೀವ್ರ ಜಟಾಪಟಿ

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾ ಹಿಂದಿನ ಸರ್ಕಾರದ ಅಕ್ರಮಗಳು, ಆಪರೇಷನ್‌ಕಮಲದ ಬಗ್ಗೆ ಕಿಡಿ ಕಾರಿದರು. ಈ ಬಗ್ಗೆ ಪ್ರತಿ ಹಂತದಲ್ಲೂ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಯನ್ನು ಬಲವಾಗಿ ಸಮರ್ಥಿಸಿಕೊಂಡು ಕಾಂಗ್ರೆಸ್‌ಪಕ್ಷ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಮಾತನಾಡಿ, ‘ಹಿಂದಿನ ಸರ್ಕಾರದ ಅಕ್ರಮಗಳ ತನಿಖೆಗೆ ವಹಿಸಿ ಎಸ್‌ಐಟಿ ರಚಿಸಿದ್ದೇವೆ. ಬೊಮ್ಮಾಯಿ ಅವರು 2013ರಿಂದಲೂ ತನಿಖೆ ನಡೆಸಿ ಎನ್ನುತ್ತಿದ್ದಾರೆ. ನೀವು ಕಳೆದ 3 ವರ್ಷ 10 ತಿಂಗಳ ಕಾಲ ಏನು ಮಾಡುತ್ತಿದ್ದಿರಿ? ಆಗ ಯಾಕೆ ತನಿಖೆ ನಡೆಸಲಿಲ್ಲ? ನಾವು 1947ರಿಂದಲೂ ತನಿಖೆ ನಡೆಸಲು ಬರುತ್ತದೆಯೇ? ನೀವು ನಮ್ಮ ಮೇಲೆ ತನಿಖೆ ನಡೆಸಲು ಯಾವುದೇ ಭ್ರಷ್ಟಾಚಾರದ ಆರೋಪದ ದಾಖಲೆಗಳಿರಲಿಲ್ಲ. ಹೀಗಾಗಿ ನಾವು 2013ರಿಂದ 18ರವರಗೆ ಹಗರಣ ಮುಕ್ತ ಸರ್ಕಾರ ನೀಡಿದ್ದೇವೆ ಎಂಬುದು ಸಾಬೀತಾಗಿದೆ’ ಎಂದು ಸಮರ್ಥಿಸಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಾವು ರಾಜಕೀಯ ದ್ವೇಷದಿಂದ ಪ್ರತ್ಯೇಕ ಎಸ್‌ಐಟಿ ಮಾಡಿ ತನಿಖೆಗೆ ವಹಿಸಿಲ್ಲ. ಆದರೆ ನೀವು ನಿಷ್ಕಿ್ರಯ ಮಾಡಿದ್ದ ಲೋಕಾಯುಕ್ತಕ್ಕೆ ಬಲ ನೀಡಿ ನಿಮ್ಮ ಅವಧಿಯಲ್ಲಿನ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ವಹಿಸಿದ್ದೇವೆ. ಎಲ್ಲವೂ ತನಿಖೆ ನಡೆಯುತ್ತಿದ್ದು ಸದ್ಯದಲ್ಲೇ ಹೊರ ಬರುತ್ತವೆ. ಎಸಿಬಿ ರಚನೆ ಮೂಲಕ ನೀವು ಲೋಕಾಯುಕ್ತ ನಿಷ್ಕಿ್ರಯ ಮಾಡಿದ್ದಿರಿ. ಇಲ್ಲರಿದ್ದರೆ ಆಗಲೇ ನಿಮ್ಮ ಹಗರಣಗಳು ಹೊರ ಬರುತ್ತಿದ್ದವು’ ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *