ವಿದೇಶಗಳಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ರೋಗಿಗಳ ಸಂಖ್ಯೆ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳಿದೆ

ಫೋರ್ಟಿಸ್ ಆಸ್ಪತ್ರೆಗಳ ವ್ಯವಹಾರ ಮುಖ್ಯಸ್ಥ ಅಕ್ಷಯ್ ಒಲೆಟಿ, ಕಳೆದ ದಶಕದಲ್ಲಿ ಸ್ಥಿರವಾಗಿ ಬೆಳೆಯುತ್ತಿದ್ದ ಉದ್ಯಮವು ಸಾಂಕ್ರಾಮಿಕ ಸಮಯದಲ್ಲಿ ವಿಮಾನ ಪ್ರಯಾಣದ ನಿರ್ಬಂಧಗಳಿಂದಾಗಿ ಸಂಪೂರ್ಣ ಬಂದ್‌ಆಗಿತ್ತು. ಆಸ್ಪತ್ರೆಯ ಅಂತಾರರಾಷ್ಟ್ರೀಯ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ 10-15% ಹೆಚ್ಚಾಗಿದೆ. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇದು ಸಂಪೂರ್ಣ ಶೂನ್ಯವಾಗಿತ್ತು.ಮಾರ್ಚ್‌ನಿಂದ ಏಪ್ರಿಲ್ 2022 ರವರೆಗೆ, ಕೋವಿಡ್ ಸಮಯದಲ್ಲಿ ಬರಲು ಸಾಧ್ಯವಾಗದವರ ಸಂಖ್ಯೆ ಹೆಚ್ಚಿರುವುದರಿಂದ ನಾವು ರೋಗಿಗಳ ದೊಡ್ಡ ಒಳಹರಿವನ್ನು ನೋಡಲಾರಂಭಿಸಿದ್ದೇವೆ. ಕಳೆದ ಮೂರು ತಿಂಗಳುಗಳಲ್ಲಿ ಈ ಪ್ರವೃತ್ತಿ ಸಾಮಾನ್ಯವಾಗಿದೆ. ರೋಗಿಗಳ ಸಂಖ್ಯೆಯು ಪೂರ್ವ ಕೋವಿಡ್ ಮಟ್ಟಕ್ಕೆ ಏರಿದೆ ಎಂದು ಅವರು ಹೇಳಿದರು. ಫೋರ್ಟಿಸ್ ಈಗ ಬೆಂಗಳೂರಿನಲ್ಲಿ ತಿಂಗಳಿಗೆ 200 ರಿಂದ 250 ಹೊಸ ಅಂತಾರಾಷ್ಟ್ರೀಯ ರೋಗಿಗಳನ್ನು ಬರಮಾಡಿಕೊಳ್ಳುತ್ತಿದೆ. ಹಾಗೆಯೇ ಮಣಿಪಾಲ್ ಆಸ್ಪತ್ರೆಗಳ ಗ್ರೂಪ್ ಸಿಒಒ ಕಾರ್ತಿಕ್ ರಾಜಗೋಪಾಲ್, ಬೆಂಗಳೂರಿನಲ್ಲಿರುವ 10 ಕೇಂದ್ರಗಳು ಒಟ್ಟಾಗಿ ಈಗ ಮಾಸಿಕ 700ರಿಂದ 800 ವಿದೇಶಿ ರೋಗಿಗಳು ಬರುತ್ತಿದ್ದಾರೆ. ಇದು ಪೂರ್ವ ಕೋವಿಡ್ ಸಂಖ್ಯೆಗಳಿಗೆ ಹತ್ತಿರದಲ್ಲಿದೆ ಎಂದರು.

Leave a Reply

Your email address will not be published. Required fields are marked *