ಇಂದಿನ ಕಲಾಪದಲ್ಲಿ ಕಬಡ್ಡಿ ಆಟದ ಬಗ್ಗೆ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು. ಅತಿವೃಷ್ಠಿ ಬಗ್ಗೆ ಸಿದ್ದರಾಮಯ್ಯ ಮಾತನಾಡುವ ವೇಳೆ ಸಚಿವ ಆರ್.ಅಶೋಕ್ ಅವರು ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು, ಯಾಕಪ್ಪಾ ಅಶೋಕ್, ಎದ್ದು ನಿಂತು ವ್ಯಾಯಾಮ ಮಾಡ್ತಾ ಇದ್ದೀಯಾ ಸುಮ್ನೆ ಕುಂತ್ಕೋ ಎಂದು ಹೇಳಿದರು. ಸಿದ್ದರಾಮಯ್ಯ ಈ ರೀತಿ ಹೇಳುತ್ತಿದ್ದಂತೆಯೇ ಅಶೋಕ್ ಅವರು ನಾನು ತುಂಬಾ ಸ್ಟ್ರಾಂಗ್ ಇದ್ದೀನಿ ಸರ್ ಎಂದರು. ಹೌದಪ್ಪಾ ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ, ನಾನು ಹೈಸ್ಕೂಲ್ ನಲ್ಲಿ ಕಬಡ್ಡಿ ಆಡ್ತಿದ್ದೆ ಈಗ ಇಲ್ಲ. ಈಗ ಯಾವ ಆಟನೂ ಆಡೋದಕ್ಕೆ ಆಗ್ತಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಂತೆಯೇ ಎಲ್ಲರೂ ನಕ್ಕರು.