ವಿಧಾನಸೌಧ ಆಧುನಿಕ ಅನುಭವ ಮಂಟಪ: ಸಿಎಂ ಬೊಮ್ಮಾಯಿ

ರಾಜ್ಯ ಏಕೀಕರಣಗೊಂಡ ಮೊದಲ ಹತ್ತು ವರ್ಷಗಳಲ್ಲಿಯೇ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆಯಾಗಬೇಕಿತ್ತು. ಆದರೆ ಇಷ್ಟು ದಿನ ತೆಗೆದುಕೊಂಡಿದ್ದಕ್ಕೆ ಯಾರನ್ನೂ ದೂಷಿಸಲ್ಲ. ನಮ್ಮ ನಮ್ಮ ಆತ್ಮಸಾಕ್ಷಿಗಳಿಗೆ ಬಿಡುತ್ತೇನೆ.ನಾವು ಕೇವಲ 75 ದಿನಗಳಲ್ಲಿ ಈ ಪ್ರತಿಮೆಗಳನ್ನು ನಿರ್ಮಾಣ ಮಾಡಿದ್ದೇವೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧ ಆಧುನಿಕ ಅನುಭವ ಮಂಟಪ. 12ನೇ ಶತಮಾನದ ಅನುಭವ ಮಂಟಪದ ತತ್ವ ಆದರ್ಶ, ವೈಚಾರಿಕತೆಗಳು ಇಲ್ಲಿ ಇನ್ನಷ್ಟು ಸಾಕಾರಗೊಳ್ಳಲಿ. ಈ ಪ್ರತಿಮೆಗಳು ಹೈಕೋರ್ಟ್‌ಎದುರಿಗೆ ನಿಂತಿವೆ. ಅಲ್ಲಿಯೂ ಅವರ ತತ್ವ ಆದರ್ಶ, ವಿಚಾರಗಳು ನಿರಂತರವಾಗಿ ಸಾಗಲಿ. ಈ ಪ್ರತಿಮೆಗಳನ್ನು ನಿರ್ಮಿಸುವ ಉಸ್ತುವಾರಿ ಹೊತ್ತಿದ್ದ ಸಚಿವ ಆರ್‌.ಅಶೋಕ್‌, ಪ್ರತಿಮೆಗಳನ್ನು ನಿರ್ಮಿಸಿದ ಜಾಹ್ನವಿ ಕಲಾ ಸಂಸ್ಥೆ ಹಾಗೂ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ ತಂಡಗಳನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *