ವಿಪಕ್ಷಗಳು ನಮ್ಮ ಮೇಲೆ ಹೆಚ್ಚಿನ ಆಕ್ರಮಣ ಮಾಡಬಹುದು ಎದುರಿಸಲು ನಾವು ಪ್ರಬಲವಾಗಿ ಸಿದ್ಧವಿರಬೇಕು,: ಸಂಸದರಿಗೆ ಮೋದಿ ಕರೆ

ಎರಡನೇ ಅವಧಿಯ ಬಜೆಟ್ ಅಧಿವೇಶನದ ಭಾಗವಾಗಿ ಮಂಗಳವಾರ ಸಂಸತ್ ಭವನದಲ್ಲಿ ಸಂಸದೀಯ ಸಭೆ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಗುಜರಾತ್ನಲ್ಲಿ ಐತಿಹಾಸಿಕ ಗೆಲುವು ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೇರಿದೆ. ಇದರಿಂದ ಅಸಮಾಧಾನಗೊಂಡಿರುವ ವಿಪಕ್ಷಗಳು ನಮ್ಮ ಮೇಲೆ ಹೆಚ್ಚಿನ ಆಕ್ರಮಣ ಮಾಡಬಹುದು ಎದುರಿಸಲು ನಾವು ಪ್ರಬಲವಾಗಿ ಸಿದ್ಧವಿರಬೇಕು. ಬಜೆಟ್ ಅಧಿವೇಶನ ಮುಂದೂಡಿಕೆ, ರಾಹುಲ್ ಗಾಂಧಿಯ ಅನರ್ಹತೆ ಪ್ರಶ್ನಿಸಿ ಪ್ರತಿಭಟನೆ ಮತ್ತು ಅದಾನಿ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸುತ್ತಿರುವ ಪ್ರಕ್ಷುಬ್ಧ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಸಂಸತ್ತಿನ ಎರಡೂ ಸದನಗಳು ಅಸ್ತವ್ಯಸ್ತಗೊಂಡಿವೆ ಮತ್ತು ಬಜೆಟ್ ವಿಧಿವಿಧಾನಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ವ್ಯವಹಾರಗಳು ನಡೆದಿಲ್ಲ, ನಾವು ನಮ್ಮ ಕೆಲಸಗಳನ್ನು ಜನರವರೆಗೂ ತಲುಪಿಸಬೇಕು. ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನವು ಗುಜರಾತ್ನಲ್ಲಿ ಲಿಂಗ ಅನುಪಾತವನ್ನು ಸುಧಾರಿಸಲು ಸಹಾಯ ಮಾಡಿದೆ. ಮುಂದೆ ಜನರ ಹೃದಯ ಗೆಲ್ಲಲು ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಸಂಸದರಿಗೆಹೇಳಿದರು.

Leave a Reply

Your email address will not be published. Required fields are marked *