ವಿವಿಧ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಇಂದು ಸರ್ಕಾರದ ವಿರುದ್ಧ ಕೆಪಿಟಿಸಿಎಲ್ ಮತ್ತು ಎಸ್ಕಾಂ‌ಹೊರಗುತ್ತಿಗೆ ನೌಕರರು ಧರಣಿ ನಡೆಸಿದ್ದಾರೆ.

ಕರ್ನಾಟಕ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಗುತ್ತಿಗೆ ನೌಕರರು ನಿರ್ಧಾರ ಮಾಡಿದ್ದಾರೆ. ಕೆಲಸ ಸ್ಥಗಿತ ಮಾಡಿ ರಾಜ್ಯದ ಸಾವಿರಾರು ಹೊರಗುತ್ತಿಗೆ ನೌಕಕರು ಹೋರಾಟಕ್ಕೆ ಬಂದಿದ್ದು, ಸಚಿವರು ಸ್ಥಳಕ್ಕೆ ಬರುವವರೆಗೆ ನಮ್ಮ ಹೋರಾಟ ನಿಲ್ಲಲ್ಲ. ಇಲ್ಲಿಂದ ನಾವು ಕದಲಲ್ಲ, ಕೆಲಸ ಮಾಡಲ್ಲ ಅಂತಾ ಪಟ್ಟುಹಿಡಿದಿದ್ದಾರೆ.ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ಕೆಪಿಟಿಸಿಎಲ್ ಕಚೇರಿ ಕಾವೇರಿ ಭವನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನ ಕೂಡ ನೀಡಿದ್ದಾರೆ.ಹೊರಗುತ್ತಿಗೆ ನೌಕರರು ಸಾಕಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಗೃಹ ಸಚಿವರು ತಮ್ಮ ಬೇಡಿಕೆ ಈಡೇರಿಕೆ ಮಾಡಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಪ್ರಮುಖ ಬೇಡಿಕೆಗಳು, ಎಲ್ಲಾ‌ಹೊರಗುತ್ತಿಗೆ ನೌಕರರ ಸೇವೆ ಕಾಯಂ ಮಾಡಬೇಕು, ಕಾಯಂ ಆಗುವವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಜೊತೆಗೆ ನೌಕರರು ವಿದ್ಯುತ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು.ಗುತ್ತಿಗೆ ಪದ್ಧತಿ ಎಂಬ ಜೀತ ಪದ್ಧತಿಯಿಂದ ನೌಕರರನ್ನು ಮುಕ್ತಗೊಳಿಸಬೇಕು. ಹಾಗೆಯೇ ಇಂಧನ ಇಲಾಖೆಯಿಂದಲೇ ನೌಕರರಿಗೆ ನೇರ ಪಾವತಿ ಮಾಡಬೇಕು. ಅದರ ಜೊತೆಗೆ ಈಗಾಗಲೇ ವಿವಿಧ ಕಾರಣದಿಂದ ವಜಾಗೊಂಡವರನ್ನು ತಕ್ಷಣ ನೇಮಕ‌ಮಾಡಬೇಕು ಎಂದು ಸಚಿವರ ಬಳಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ನಮ್ಮ ಮುಂದಿನ ಹೋರಾಟ ಇನ್ನೂ ಉಗ್ರ ರೂಪಾ ತಾಳಲಿದೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *