ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾದಲ್ಲಿ 6 ದಶಕಗಳಲ್ಲೇ ಮೊದಲ ಬಾರಿ ಚೀನಾ ಜನಸಂಖ್ಯೆ ಇಳಿಕೆ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಚೀನಾದಲ್ಲಿ 6 ದಶಕಗಳಲ್ಲಿ ಮೊದಲ ಬಾರಿ ಕಳೆದ ವರ್ಷ ಕುಗ್ಗಿದೆ ಎಂದು ಅಧಿಕೃತ ಅಂಕಿ ಅಂಶವೊಂದು ಮಂಗಳವಾರ ತಿಳಿಸಿದೆ. 1.4 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಜನರಿಗೆ ವಯಸ್ಸಾದಂತೆ ಜನನದ ದರ ತೀವ್ರವಾಗಿ ಇಳಿಕೆಯಾಗುತ್ತಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. 2022ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆ ಸುಮಾರು 141,17,50,000 ರಷ್ಟಿತ್ತು 2021ರ ವರ್ಷದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು 8,50,000 ? ರಷ್ಟು ಜನಸಂಖ್ಯೆ ಇಳಿಕೆಯಾಗಿದೆ. ಎಂದು ಬೀಜಿಂಗ್‌ನ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿ ಮಾಡಿದೆ. ಚೀನಾದಲ್ಲಿ ಮಿತಿಮೀರಿ ಜನಸಂಖ್ಯೆ ಬೆಳೆಯುತ್ತಿದ್ದ ಹಿನ್ನೆಲೆ 1980ರಲ್ಲಿ ಕಟ್ಟುನಿಟ್ಟಿನ 1 ಮಗುವಿನ ನೀತಿಯನ್ನು ತಂದಿತ್ತು. ಈ ನೀತಿಯನ್ನು 2016ರಲ್ಲಿ ಕೊನೆಗೊಳಿಸಿ, 2021ರಲ್ಲಿ ದಂಪತಿಗೆ 3 ಮಕ್ಕಳನ್ನು ಹೊಂದಲು ಅವಕಾಶ ನೀಡಿತು.

Leave a Reply

Your email address will not be published. Required fields are marked *