ವಿಶ್ವದ ಅತ್ಯಂತ ಮೌಲ್ಯಯುತವಾದ ಎಜ್ಯುಟೆಕ್‌ಸ್ಟಾರ್ಟ್ಅಪ್ ಕಂಪನಿ ಬೈಜೂಸ್ ಮುಂದಿನ 6 ತಿಂಗಳಲ್ಲಿ ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಕೋವಿಡ್‌ಬಳಿಕ ಭಾರೀ ನಷ್ಟವನ್ನು ಬೈಜೂಸ್‌ಅನುಭವಿಸುತ್ತಿದೆ. ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್‌ನಾಥ್ ಹೇಳಿದ್ದಾರೆ. ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬೈಜೂಸ್ ಶೇ.5ರಷ್ಟು ನೌಕರರು ವಜಾ ಮಾಡಲು ನಿರ್ಧರಿಸಿದೆ. ಕಂಪನಿಯನ್ನು ಲಾಭದಾಯಕ ಮಾಡಿಕೊಳ್ಳಲು 10 ಸಾವಿರ ಶಿಕ್ಷಕಕರನ್ನು ನೇಮಿಸಲಾಗುವುದು. ಈ ಪ್ರಕ್ರಿಯೆ ಮುಂದಿನ 6 ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.