ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು, ಈ ದಿನದಂದೇ ಅರಣ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.1ಇಂದು ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಥಣಿಸಂದ್ರ ರಾಚೇನಹಳ್ಳಿ ಕೆರೆ ಬಳಿ ಬಿಬಿಎಂಪಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪರಿಸರಕ್ಕೆ ನಾವು ಅಡ್ಜಸ್ಟ್ ಆಗಿಲ್ಲ, ಪರಿಸರವೇ ನಮಗೆ ಅಡ್ಜಸ್ಟ್ ಆಗಿದೆ. ಬಹಳ ಪ್ಯಾಷನ್ ನಿಂದ ಬೆಂಗಳೂರು ಅಭಿವೃದ್ಧಿ ಮಾಡಬೇಕು ಅನ್ನೋದು ನನ್ನ ಉದ್ದೇಶ ಎಂದರು. ಇದೇ ವೇಳೆ ಬಿಬಿಎಂಪಿ ಅರಣ್ಯ ಇಲಾಖೆ ಐಎಫ್‍ಎಸ್ ಅಧಿಕಾರಿ ಸರಿನಾ ಸಿಕ್ಕಲಿಗಾರ್ ಮೇಲೆ ಗರಂ ಆದ ಡಿಕೆಶಿ, ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೈದರು. ಕಾಮನ್ ಸೆನ್ಸ್ ಇರಬೇಕು ಎಲ್ಲಿ ಗಿಡ ನಡಬೇಕು ಅಂತ ನಿಮ್ಮ ಕೆಲಸ ಸರಿಯಿಲ್ಲ, ಬದಲಾಯಿಸಿಕೊಳ್ಳಿ. ಇಂದು ನನ್ನ ಕೈಯಲ್ಲಿ ಗಿಡ ನೆಡಿಸಿದ್ದೀರಿ, ಇದು ತಪ್ಪು,ಪಾರ್ಕ್ ನಲ್ಲಿ ಖಾಲಿ ಇರುವ ಜಾಗದಲ್ಲಿ ಹಾಕಿಸಬೇಕಿತ್ತು . ಗಿಡ ಹಾಕಬೇಕಾದ್ರೆ ಯೋಚನೆ ಮಾಡಬೇಕು. ಗಿಡಕ್ಕೆ ನನ್ನ ಹೆಸರು, ಕೃಷ್ಣ ಬೈರೇಗೌಡ ಅವರ ಹೆಸರು ಹಾಕಿದ್ದೀರಾ. ಗಿಡಗಳಿಗೆ ಏಕೆ ನಮ್ಮ ಹೆಸರು ಇಟ್ಟಿದ್ದೀರಿ. ನಾವು ಬಂದು ಗಿಡ ನೋಡ್ಕೊತ್ತೀವಾ?. ಅದರ ಬದಲಿಗೆ ಶಾಲಾ ಮಕ್ಕಳ ಹೆಸರು ಇಡಿ. ಕೇವಲ ಫೆÇೀಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟ ಇಲ್ಲ. ನಾವು ಮಾಡುವ ಕೆಲಸ ಶಾಶ್ವತವಾಗಿ ಇರಬೇಕು, ಹೊರತು ತೋರಿಕೆಗೆ ಇರಬಾರದು. ಮರ ಇರುವ ಕಡೆ ಗಿಡ ನೆಡಿಸುವುದಲ್ಲ, ಮರ ಇಲ್ಲದ ಕಡೆ ಗಿಡ ನೆಡಿಸಬೇಕು. ಪಾರ್ಕ್‍ಗಳಿಗಿಂತ ಹೆಚ್ಚಾಗಿ ರಸ್ತೆ ಸೇರಿದಂತೆ ಖಾಲಿ ಜಾಗದಲ್ಲಿ ಗಿಡ ಹಾಕಿ. ಮಕ್ಕಳು ಗಿಡಗಳನ್ನು ನೋಡಿಕೊಳ್ಳುತ್ತಾರೆ.Bಎಷ್ಟು ಅಂತರಕ್ಕೆ ಗಿಡ ಹಾಕಬೇಕು, ಯಾವ ಗಿಡ ಹಾಕಬೇಕು ಅನ್ನೋದು ಗೊತ್ತಿರಬೇಕು. ನಾನು ನನ್ನ ಊರಿನಲ್ಲಿ ಗಿಡಗಳನ್ನ ಬೆಳಸಿದ್ದೀನಿ, ಹೇಗೆ ಬೆಳಸಿಬೇಕು ಅನ್ನೋದು ನನಗೆ ಗೊತ್ತಿದೆ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡೋದು ಬಿಡಿ ಎಂದರು.