ವಿಷಕನ್ಯೆ’ಯಿಂದ ಕಾಂಗ್ರೆಸ್ ಪಕ್ಷ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ಜೊತೆ ಮಾತನಾಡಿದ ಆಡಿಯೋ ನನ್ನ ಬಳಿಯಿದೆ. ಇದೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸುತ್ತೇನೆ: ಜಾರಕಿಹೊಳಿ

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಡಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ವಿರುದ್ಧವೂ ಗುಡುಗಿದರು.ಬೆಳಗಾವಿ ಗ್ರಾಮೀಣ ಕ್ಷೇತ್ರದ ಓರ್ವ ವಿಷಕನ್ಯೆ'ಯಿಂದ ಇವತ್ತು ಕಾಂಗ್ರೆಸ್ ಪಕ್ಷ ಹಾಳಾಗ್ತಿದೆ. ಒಂದು ವೇಳೆ ರಾಜ್ಯದಲ್ಲಿ ಜಾತಿ ಸಂಘರ್ಷ ಆದರೂ ಅದಕ್ಕೆ ಡಿಕೆ ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿಯೇ ಕಾರಣ. ನನ್ನ ವಿರುದ್ಧ 40 ಕೋಟಿ ರೂ. ಸಿಡಿ ಷಡ್ಯಂತ್ರ ಮಾಡಿದ್ದು ಡಿಕೆಶಿನೇ. ನನ್ನ ಸಿಡಿ ಮಾತ್ರವಲ್ಲದೇ ನೂರಾರು ಸಿಡಿ ಮಾಡಿದ್ದಾರೆ. ಸಾಕಷ್ಟು ಅಧಿಕಾರಿಗಳು ಅವರ ಜಾಲದಲ್ಲಿ ಸಿಲುಕಿದ್ದಾರೆ. ಇದು ಗಂಭೀರವಾದ ವಿಷಯ. ರಾಜ್ಯ ಸರ್ಕಾರ ತಕ್ಷಣ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಎಲ್ಲಾ ಆಯಾಮದಲ್ಲೂ ತನಿಖೆ ಆಗಬೇಕು ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಇರಲು ನಾಲಾಯಕ್. ಜೊತೆಗೆ ನನ್ನ ವಿರುದ್ಧ ಸಿಡಿಗೆ ಸಹಕರಿಸಿದ ಯುವತಿಯನ್ನೂ ಅರೆಸ್ಟ್ ಮಾಡಬೇಕು. ಡಿಕೆ ಶಿವಕುಮಾರ್ ಅವರು ಸಿಡಿ ಬಿಡುಗಡೆ ಮಾಡಿದ ಬಳಿಕವೂ ರಾಜಿಯಾಗಲು ಮುಂದಾಗಿದ್ದರು. ಆದರೆ ನಾನು ಒಪ್ಪಲಿಲ್ಲ. ಈಗ ಡಿಕೆ ಶಿವಕುಮಾರ್ ತಮ್ಮ ಗರ್ಲ್ಫ್ರೆಂಡ್ ಜೊತೆಗೆನನ್ನ ಹತ್ತಿರ ದುಬೈನಲ್ಲಿ, ಲಂಡನ್‌ನಲ್ಲಿ ಮನೆಯಿದೆ. ಸಾವಿರಾರು ಕೋಟಿ ಹಣ ಇದೆ ಎಂದು ಹೇಳಿಕೊಂಡಿರುವ ಆಡಿಯೋ ನನ್ನ ಬಳಿಯಿದೆ. ಇದೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *