ಶರವೇಗದ ಆರ್ಥಿಕಾಭಿವೃದ್ಧಿ ಕಾಣುತ್ತಿರುವ ಭಾರತ 2075ರ ವೇಳೆಗೆ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಅಮೆರಿಕವನ್ನೂ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಸದ್ಯ ಭಾರತದ ಜಿಡಿಪಿ 44 ಲಕ್ಷ ಕೋಟಿ ರು.ನಷ್ಟಿದ್ದು, ಅಮೆರಿಕದ್ದು 430 ಲಕ್ಷ ಕೋಟಿ ರು.ನಷ್ಟಿದೆ. 2075ರ ವೇಳೆಗೆ ಭಾರತದ ಜಿಡಿಪಿ 52.5 ಲಕ್ಷ ಕೋಟಿ ಡಾಲರ್‌ದಾಟಲಿದೆ ಎಂದು ವರದಿ ಹೇಳಿದೆ.140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಜಿಡಿಪಿ ನಾಟಕೀಯವಾಗಿ ವಿಸ್ತರಣೆಯಾಗಲಿದೆ. ಅಮೆರಿಕದ ಜಿಡಿಪಿಯನ್ನು 2075ಕ್ಕೆ ಹಿಂದಿಕ್ಕಲಿದೆ ಎಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಕಂಪನಿಯಾಗಿರುವ ಗೋಲ್ಡ್‌ಮನ್‌ಸ್ಯಾಕ್ಸ್‌ಮುನ್ಸೂಚನೆ ನೀಡಿದೆ.