ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು.ಪಾಕಿಸ್ತಾನ, ಇರಾನ್ ಭಾಗಗಳಿಂದ ಸಮುದ್ರ ಮಾರ್ಗಗಳ ಮೂಲಕ ಡ್ರಗ್ಸ್ ಭಾರತಕ್ಕೆ ರವಾನೆಯಾಗುತ್ತಿದೆ. ಆದ್ದರಿಂದ ದಕ್ಷಿಣ ಭಾಗದ ಕೋಸ್ಟ್ ಗಾರ್ಡ್ ನಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು. 30%, 40%, 50% ಜನತೆ ಡ್ರಗ್ಸ್ಗೆ ಅಡಿಕ್ಟ್ ಆದ್ರೆ ಹೇಗೆ? ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಸಮಿತಿಗಳು ರಚನೆಯಾಗಿದ್ದು, ನಿರಂತರವಾಗಿ ಕೆಲಸ ಮಾಡಬೇಕು ದೇಶದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಸಮರ ಸಾರಿದೆ. ಡ್ರಗ್ಸ್ ಮುಕ್ತ ಮಾಡೋದು ಎಲ್ಲ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಬೇಕು. ಎಲ್ಲ ಇಲಾಖೆಗಳೂ ಇದಕ್ಕೆ ಕೈ ಜೋಡಿಸಬೇಕು.ಸಣ್ಣ-ಸಣ್ಣ ವ್ಯಕ್ತಿಗಳಿಗೆ ಡ್ರಗ್ಸ್ ಸಾಗಣೆ ಆಗ್ತಿದೆ. ಇದು ಹೇಗೆ ಆಗ್ತಿದೆ ಅನ್ನೋದನ್ನ ಪತ್ತೆ ಹಚ್ಚಿ ಕ್ರಮ ಆಗಬೇಕು ಎಂದು ತಾಕೀತು ಮಾಡಿದರು.