ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶಮೂರ್ತಿಯನ್ನ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ. ಆದ್ರೆ ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ ಗಣೇಶ ಹಬ್ಬ ಬಿಜೆಪಿ ಸರ್ಕಾರ ಬಂದಾಗಿನಿಂದ ಮಾಡಿದ್ದಲ್ಲ. ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬoದಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ನಮಾಜ್‌ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.