ವಿಧಾನಸೌಧದಲ್ಲಿ ರಾಜ್ಯ ಕಾಂಗ್ರೆಸ್‌ಸರ್ಕಾರ ವಿರುದ್ಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು, ಶಾಸಕರ ಶಿಫಾರಸ್ಸು ಪತ್ರವನ್ನು ಸಿಎಂ ಕಚೇರಿಗೆ ತೆಗೆದುಕೊಂಡು ಹೋದ್ರೆ 30 ಲಕ್ಷ ಕೊಡಿ ಎಂದು ಕೇಳಿದ್ದಾರೆ ಕಳೆದ ಒಂದೆರೆಡು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಜಾಗಟೆ ಹೊಡೆದ್ರಲ್ಲಪ್ಪ. ಪೇಸಿಎಂ ಅಂತ ರೋಡ್‌ನಲ್ಲಿ ಪೋಸ್ಟರ್ ಹಾಕಿದ್ರಲ್ಲ ಆಗ ದಾಖಲೆ ಇತ್ತಾ!? ಮಧ್ಯಪ್ರದೇಶದಲ್ಲಿ ಕೂಡ ಅದನ್ನೆ ಎಕ್ಸ್‌ಪೆರಿಮೆಂಟ್ ಮಾಡಲಾಗಿದೆ. ಸಿಎಂ ಕಚೇರಿ ಏನಾಗಿದೆ ಅಂತ ಜಗಜ್ಜಾಹಿರಾಗಿದೆ. ವಿರೋಧ ಪಕ್ಷದ ನಾಯಕನಾಗಿ ಅಂತ ಹೇಳಲ್ಲ ಸದಸ್ಯನಾಗಿ ಸರ್ಕಾರದ ಲೋಪದೋಷಗಳ ಬಗ್ಗೆ ಟೀಕೆ ಮಾಡುತ್ತೇನೆ. ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡುವವನಲ್ಲ, ಕುಮಾರಸ್ವಾಮಿ ಮಾತನಾಡಿದ್ರೆ ವಿಚಾರ ಇಲ್ಲದೇ ಮಾತನಾಡಲ್ಲ. ಸದನದಲ್ಲಿ ಮಾತನಾಡುತ್ತೇನೆ, ಬಿಜೆಪಿಗರ ಮೇಲೆ ಅಷ್ಟು ಆರೋಪ ಮಾಡಿದ್ರಲ್ಲ ಒಂದಾದ್ರೂ ದಾಖಲೆ ಕೊಟ್ಡಿದ್ದೀರಾ? ಎಂದು ಕಾಂಗ್ರೆಸ್‌ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ.ಇನ್ನೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಕುಲಗೆಡಿಸಿದವರು ಯಾರು? ಬೆಂಗಳೂರು ಯಾಕೆ ಈ ಪರಿಸ್ಥಿತಿಗೆ ಬಂತು, ನಿಮ್ಮ ಯೋಗ್ಯತೆಗೆ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಬೇಕಿತ್ತು. ಯಾಕೆ ಬಿಡಿಎ ಇಟ್ಕೊಂಡಿದ್ದೀರಾ? ಬೆಂಗಳೂರನ್ನ ಐದು ಆರು ಡಿವಿಷನ್ ಮಾಡ್ತಾರಂತೆ, ಹೀಗೆ ಮಾಡಿದ್ರೆ ಮಣ್ಣು ಹಾಕಿಕೊಳ್ಳಬೇಕು. ಬೆಂಗಳೂರು ಕೆರೆ ನಾಶ ಮಾಡಿದ್ದಾರೆ ಬೆಂಗಳೂರು ಕೆರೆ ಉಳಿಸಿಕೊಂಡಿದ್ರೆ ಈ ಪರಿಸ್ಥಿತಿ ಬರುತ್ತಾ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಸಮ್ಮಿಶ್ರ ಸರಕಾರದಂತೆ ಆಗಿರುವ ಈ ಸರಕಾರವೂ ಐಸಿಯು ಪಾಲಾಗುವ ಕಾಲ ಹತ್ತಿರದಲ್ಲೇ ಇದೆ. ಈ ಸರಕಾರಕ್ಕೆ ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ದೂರದೃಷ್ಟಿ, ಆತ್ಮವಿಶ್ವಾಸವೇ ಇಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.