ಶಾಸಕರ ಸಮಸ್ಯೆಗೆ ಗಮನ ಕೊಡಿ ;ಉಸ್ತುವಾರಿಗಳಿಗೆ ಸಿಎಂ ಸೂಚನೆ

ಸಚಿವರ ಕಾರ್ಯವೈಖರಿ ವಿರುದ್ಧ ಸ್ವಪಕ್ಷೀಯ ಶಾಸಕರ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿರುವ ಜಿಲ್ಲಾವಾರು ಸಚಿವರು, ಶಾಸಕರ ಸರಣಿ ಸಭೆ ಮಂಗಳವಾರವೂ ನಡೆದಿದ್ದು, ಎರಡನೇ ದಿನವೂ ಆರು ಜಿಲ್ಲೆಗಳ ಸಚಿವ, ಶಾಸಕರ ಜೊತೆ ಸತತ 11 ಗಂಟೆಗಳ ಕಾಲ ಸರಣಿ ಸಭೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದರು. 50 ಶಾಸಕರು ಮತ್ತು ಜಿಲ್ಲಾ ಸಚಿವರುಗಳು ಹಾಗೂ ಕಾರ್ಯದರ್ಶಿಗಳ ಜತೆ ಸರಣಿ ಸಭೆಗಳನ್ನು ನಡೆಸಿ ಶಾಸಕರ ಕ್ಷೇತ್ರದ ಕೆಲಸಗಳು, ಅಗತ್ಯ ಅನುದಾನ, ವರ್ಗಾವಣೆ, ಪರಸ್ಪರ ಸಮನ್ವಯತೆ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿ.ಈ ವೇಳೆ, ಶಾಸಕರ ಸಮಸ್ಯೆಗೆ ಗಮನ ಕೊಡಿ ಎಂದು ಉಸ್ತುವಾರಿಗಳಿಗೆ ಸೂಚಿಸಿದರು.ಶಾಸಕರ ಯಾವುದೇ ವಿಚಾರಗಳಿದ್ದರೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಅವರ ಕ್ಷೇತ್ರ ಸಮಸ್ಯೆ, ಬೇಡಿಕೆಗಳನ್ನು ತಮ್ಮಿಂದ ಪರಿಹರಿಸಲು ಸಾಧ್ಯವಾಗುವುದಿದ್ದರೆ ಕೂಡಲೇ ಸ್ಪಂದಿಸಬೇಕು. ಒಂದು ವೇಳೆ ತಮ್ಮಿಂದ ಆಗದ ವೇಳೆಯಲ್ಲಿ ಮಾತ್ರ ನನ್ನ ಗಮನಕ್ಕೆ ತರಬೇಕು. ಎಂದು ಮುಖ್ಯಮಂತ್ರಿಗಳು ಸೂಚಿಸಿದರು ಎಂದು ತಿಳಿದು ಬಂದಿದೆ.ಸಭೆಯಲ್ಲಿ ಪ್ರಮುಖವಾಗಿ ವಿವಿಧ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ್ಖರ್ಗೆ, ಶರಣ್ಪ್ರಕಾಶ್ಪಾಟೀಲ್, ಸತೀಶ್ಜಾರಕಿಹೊಳಿ, ಲಕ್ಷ್ಮೇ ಹೆಬ್ಬಾಳ್ಕರ್, ಶಿವರಾಜ್ತಂಗಡಗಿ, ಶಿವಾನಂದ ಪಾಟೀಲ್ಹಾಗೂ ಆಯಾ ಜಿಲ್ಲೆಗಳ ಶಾಸಕರುಗಳು ಪ್ರತ್ಯೇಕ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *