ಆರ್.ಆರ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದ ವೇಲು ನಾಯ್ಕರ್, ಮಾಜಿ ಸಚಿವ ಮುನಿರತ್ನ ಅವರ ಜೊತೆಯಲ್ಲಿದ್ದ ಮಾಜಿ ಕಾರ್ಪೋರೇಟರ್‌ಗಳು ಹನಿಟ್ರ್ಯಾಪ್‌ಮಾಡುತ್ತಿದ್ದರು. ಸಚಿವರಾಗಿದ್ದ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸೋದು ಹೇಗೆ ಎಂದು ಕೇಳಿದೆವು.ಅದಕ್ಕೆ ಮುನಿರತ್ನ ನಿಮ್ಮಗಳದ್ದು ಈಸ್ಟ್ ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸೋದು ಹನಿಟ್ರ್ಯಾಪ್ ಮಾಡೋದು ಹೆದರಿಸೋದು ಇದೇ ಅವರ ಕೆಲಸ.ಅವರು ದಾಖಲೆ ಕೇಳಿದ್ರೆ ಖಂಡಿತ ನಾನು ಫ್ರೂ ಮಾಡ್ತೀನಿ. ನನಗೆ ನನ್ನ ಮೇಲೆ ಬಲವಾದ ನಂಬಿಕೆ ಇದೆ, ನನ್ನ ಯಾವುದೇ ವಿಡಿಯೋ ಇಲ್ಲ. ಎಡಿಟಿಂಗ್ ಏನಾದರೂ ಮಾಡಿದ್ರೆ ಅನ್ನೋ ಕಾರಣಕ್ಕೆ ನನ್ನ ಹೆಂಡ್ತಿಗೆ ಮೊದಲೆ ಹೇಳಿದ್ದೀನಿ. ಮುನಿರತ್ನ ಮುಂದೆ ಬಂದು ವೇಲು ಪ್ರೂವ್ ಮಾಡು ಅಂದ್ರೆ ಖಂಡಿತ ನನ್ನ ಆರೋಪದ ಬಗ್ಗೆ ಸಾಬೀತು ಮಾಡ್ತೀನಿ ಎಂದು ಹೇಳಿದರು.