ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶಿವಮೊಗ್ಗ ಏರ್‌ಪೊರ್ಟ್‌ಅನ್ನು ಉದ್ಘಾಟಿಸಿದ್ರು. ಸಿರಿಗನ್ನಡಂ ಗೆಲ್ಗೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಬಳಿಕ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಲೋಕಾರ್ಪಣೆ, ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ. ಇಂದು ಶಿವಮೊಗ್ಗಕ್ಕೆ ಏರ್‌ಪೋರ್ಟ್‌ಸಿಕ್ಕಿದ್ದು, ಜನರ ಕನಸು ಈಡೇರಿದೆ. ಶಿವಮೊಗ್ಗ ಏರ್‌ಪೋರ್ಟ್‌ಬಹಳ ಸುಂದರವಾಗಿದೆ. ರಸ್ತೆ, ರೈಲ್ವೆ ಯೋಜನೆಗಳಿಗೂ ಶಿಲಾನ್ಯಾಸ, ಕೆಲಸ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಸುತ್ತಮುತ್ತಲಿನ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಮಲೆನಾಡು ಪ್ರಮುಕವಾಗಿ ಶಿವಮೊಗ್ಗ ಜಿಲ್ಲೆಯನ್ನು ಹಾಡಿ ಹೊಗಳಿದರು. ಡಬಲ್‌ಎಂಜಿನ್‌ಸರ್ಕಾರದಿಂದ ಅಭಿವೃದ್ಧಿಯ ವೇಗವೂ ಎರಡು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೊದಿ ಹೇಳಿದರು. ಪ್ರಮುಖವಾಗಿ, ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ, ಮಾಜಿ ಸಿಎಂ ಅನ್ನು ಸಹ ಶ್ಲಾಘಿಸಿದ್ದು, ಶಿವಮೊಗ್ಗ ಏರ್‌ಪೋರ್ಟ್ ಅನ್ನು ಬಿಎಸ್‌ವೈ ಬರ್ತಡೇ ಉಡುಗೊರೆಯನ್ನಾಗಿ ನೀಡಿದ್ದಾರೆ.