ಶ್ರೀಲಂಕಾ ತಲುಪಿರುವ ಯುವಾನ್ ವಾಂಗ್ 5 ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ ಭರವಸೆ

ಚೀನಾ ಕಳುಹಿಸಿರುವ ಹಡಗು ಉಪಗ್ರಹ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಟ್ರ್ಯಾಕಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ಚೀನಾದ ಯುವಾನ್ ವಾಂಗ್ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದ್ದರಿಂದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಯುವಾನ್ ವಾಂಗ್ 5 ಹಡಗಿನ ಕಾರ್ಯಾಚರಣೆ ಯಾವುದೇ ದೇಶದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಕಾರ್ಯಾಚರಣೆಗೂ ಯಾವುದೇ ದೇಶಗಳು ಅಡ್ಡಿ ಪಡಿಸಬಾರದು ಎಂದು ವಿನಂತಿಸಿದರು. ಶ್ರೀಲಂಕಾ ಆಗಸ್ಟ್ 16 ರಿಂದ 22ರ ವರೆಗೆ ಹಡಗಿನ ಪ್ರವೇಶಕ್ಕೆ ಅನುಮತಿ ನೀಡಿತು. ಶ್ರೀಲಂಕಾದ ಸಹಕಾರದಿಂದಾಗಿ ಯಶಸ್ವಿಯಾಗಿ ಹಂಬನತೋಟಾ ಬಂದರಿನಲ್ಲಿ ಲಂಗರು ಹಾಕಿದೆ. ಚೀನಾದಿಂದ ಸಾಲ ಪಡೆದು ದಿವಾಳಿಯಾಗಿರುವ ಶ್ರೀಲಂಕಾಗೆ ಬೆಂಬಲ ವಿಸ್ತರಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *