ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತ ಸಂವಿಧಾನ ನೀಡಿದ ಸೌಲಭ್ಯ, ಸವಲತ್ತು ಉಳಿಸಿ, ಬೆಳೆಸಬೇಕು. 18 ವರ್ಷಕ್ಕೆ ಮತದಾನದ ಹಕ್ಕು ಕೊಟ್ಟಪಕ್ಷ ಕಾಂಗ್ರೆಸ್. ನೀವೆಲ್ಲರೂ ಒಗ್ಗೂಡಿದರೆ ಈ ಫ್ಯಾಸಿಸ್ವ್‌ಮನಸ್ಸಿನ ಜನರನ್ನು ಒದ್ದೋಡಿಸಬಹುದು ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡದಿದ್ದರೆ ಮುಂದಿನ ಪೀಳಿಗೆ ಗುಲಾಮರಾಗಿ ಬಾಳಬೇಕಾಗುತ್ತದೆ ಎಂದು ಕಿಡಿಕಾರಿದರು.ಈ ದೇಶಕ್ಕೆ ಸಮರ್ಥ ಹಾಗೂ ಹೊಸ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ದೇಶದಲ್ಲಿ ಸಂವಿಧಾನ ಉಳಿಯದಿದ್ದರೆ ನಾವೆಲ್ಲರೂ ಸತ್ತಂತೆ. ನಮ್ಮ ಸಂವಿಧಾನದಿಂದ ನಮ್ಮೆಲ್ಲರ ಬದುಕು ಹಸನಾಗಿದೆ. ಸರ್ಕಾರ ಕೊಟ್ಟಗ್ಯಾರಂಟಿ ಅನುಷ್ಠಾನವಾಗಿದೆ. ಇದನ್ನು ಭಾರತದ ಎಲ್ಲಾ ವರ್ಗ ಒಪ್ಪಿದೆ. ಈ ಯೋಜನೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಮೋದಿ ಹೇಳಿದರು. ಅವರು ಇವತ್ತು ಕಣ್ತೆರೆದು ನೋಡಲಿ. ಗೃಹಲಕ್ಷ್ಮೀ ಯೋಜನೆಯನ್ನು ಜನ ಹೃದಯಪೂರ್ವಕವಾಗಿ ಒಪ್ಪಬಹುದು ಎಂಬುದನ್ನು ಮೋದಿ ತಿಳಿದುಕೊಳ್ಳಬೇಕು. ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಸೋನಿಯಾ ಗಾಂಧಿ. ಅದು ಉತ್ತಮ ಯೋಜನೆ ಅಲ್ವೇ? ಕುತಂತ್ರದಿಂದ ರಾಹುಲ್‌ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಯಿತು. ಆದರೆ, ರಾಹುಲ್‌ಗಾಂಧಿಯವರು ಹೆದರಲಿಲ್ಲ ಎಂದು ಹರಿಹಾಯ್ದರು.