ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು ಅವರು, ಸಂಸದೆ ಸುಮಲತಾ ಅಂಬರೀಶ್ ನಾಳೆಯೇ ಬಿಜೆಪಿ ಸೇರಿಕೊಳ್ಳುತ್ತಾರೆ ಮೋದಿ ಕಾರ್ಯಕ್ರಮದಲ್ಲೇ ಸೇರ್ಪಡೆ ಆಗೋ ಪ್ಲಾನ್ ಮಾಡಿದ್ರು. ಆದರೆ ಸರ್ಕಾರಿ ಕಾರ್ಯಕ್ರಮ ಆಗಿದ್ರಿಂದ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನ ಪ್ರಕಾರ ಅವರು ನಾಳೆ ಬಿಜೆಪಿ ಸೇರಬಹುದು ಎಂದಿದ್ದಾರೆ.