ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷ ಭಾರೀ ಆಕ್ರೋಶದ ನಂತರ ಕೈಬಿಟ್ಟಿದ್ದ ಪಾರ್ಕಿಂಗ್ ಟ್ಯಾಕ್ಸ್ ನೀತಿಯನ್ನು ಜಾರಿ ಮಾಡೋಕೆ ಪ್ರಯತ್ನ ನಡೆಸಿದೆ. ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಬಿಬಿಎಂಪಿಗೆ ಆಗುತ್ತಿಲ್ಲ. ಆದರೆ, ಸಿಕ್ಕಸಿಕ್ಕಿದ್ದಕ್ಕೆಲ್ಲಾ ತೆರಿಗೆ ಹಾಕೋ ಚಾಳಿ ಮಾತ್ರ ಮುಂದುವರೆಸಿದೆ. ಮನೆ ಮುಂದಿನ ರಸ್ತೆಯಲ್ಲಿ ಬೈಕ್, ಕಾರು, ಆಟೋ, ಟೆಂಪೋ, ಟ್ಯಾಕ್ಸಿ ನಿಲ್ಲಿಸುವುದಕ್ಕೆ ಪಾರ್ಕಿಂಗ್ ತೆರಿಗೆ ಹಾಕಲು ಪ್ಲಾನ್ ಮಾಡುತ್ತಿದೆ. ಮುಂದಿನ ವಾರದೊಳಗೆ ಪಾರ್ಕಿಂಗ್ ಶುಲ್ಕ ವಿಧಿಸುವ ನೀತಿಯನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.