ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಗುತ್ತಿಗೆ ಆಧಾರದಲ್ಲಿ ಆಗೋ ನೇಮಕಾತಿ ಮೀಸಲಾತಿ ಜಾರಿ ಮಾಡಿ. ಕೇವಲ ಸರ್ಕಾರ ಹುದ್ದೆಗೆ ಮಾತ್ರ ಮೀಸಲಾತಿ ಜಾರಿ ಮಾಡಿದರೆ ಸಾಲದು. ಸರ್ಕಾರಿ ಇಲಾಖೆಗೆ ಗುತ್ತಿಗೆ ಆಧಾರದ ನೇಮಕಾತಿಗೂ ಮೀಸಲಾತಿ ಜಾರಿ ಮಾಡುವಂತೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಈಗಾಗಲೇ ಎಲ್ಲಾ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ ಆಗಿದೆ. ಹೊಸ ನೇಮಕಾತಿಯಲ್ಲಿ ಮೀಸಲಾತಿ ಕೊಟ್ಟೆ ಕೊಡುತ್ತೇವೆ. ಎಲ್ಲಾ ನೇಮಕಾತಿಯಲ್ಲಿ ಸಂವಿಧಾನದ ಪ್ರಕಾರ ಮೀಸಲಾತಿ ಕೊಡ್ತೀವಿ. ಇದರಲ್ಲಿ ಎರಡು ಮಾತಿಲ್ಲ ಇನ್ನು ಮುಂದೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳೋರಿಗೆ ಮೀಸಲಾತಿ ನಿಯಮ ಪಾಲನೆ ಮಾಡಲು ಸೂಚನೆ ನೀಡುತ್ತೇನೆ ಅಂತ ಸ್ಪಷ್ಟಪಡಿಸಿದರು.