ಸರ್ಕಾರದ ಒಂದೇ ಒಂದು ರುಪಾಯಿ ಖಾಸಗಿಯವರಿಗೆ ಹೋಗಲು ಬಿಡುವುದಿಲ್ಲ: ಡಿಕೆಶಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗವನ್ನು ಮೆಟ್ರೋ ಯೋಜನೆಗೆ ನೀಡಿದ ಸಂಬಂಧ 24 ಕೋಟಿ ರು. ಪರಿಹಾರವನ್ನು ಬಿಡಿಎಗೆ ನೀಡುವ ಬದಲು ಕೆಐಎಡಿಬಿಯು ಖಾಸಗಿಯವರಿಗೆ ನೀಡಿರುವ ಬಗ್ಗೆ ದಾಖಲೆ ಸಲ್ಲಿಸಿದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ಭರವಸೆ ನೀಡಿದರು.ಜೆಡಿಎಸ್‌ಸದಸ್ಯರ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳ ನೀಡುವ ಮಾಹಿತಿ ಪ್ರಕಾರ ಒವರ್‌ಲ್ಯಾಪ್‌ಆಗಿ ಹಣ ನೀಡಲಾಗಿದೆ ಹೊರತು, ಖಾಸಗಿಯವರಿಗೆ ಪರಿಹಾರ ನೀಡಿಲ್ಲ, ತಮ್ಮಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ, ದಾಖಲೆ ಇದ್ದಲ್ಲಿ ತಮಗೆ ಸಲ್ಲಿಸಿದರೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಸರ್ಕಾರದ ಒಂದೇ ಒಂದು ರುಪಾಯಿ ಖಾಸಗಿಯವರಿಗೆ ಹೋಗಲು ಬಿಡುವುದಿಲ್ಲ ಎಂದರು.

Leave a Reply

Your email address will not be published. Required fields are marked *