ಶಿಕ್ಷಣ ಇಲಾಖೆಯಲ್ಲೂ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ಅನಧಿಕೃತ ಪ್ರಹಾರ ನಡೆಸಿದೆ. ಅನಧಿಕೃತ ಖಾಸಗಿ ಶಾಲೆಗಳ ತೆರವಿಗಾಗಿ ಆಪರೇಷನ್ ಕ್ಲೀನ್ ಅಭಿಯಾನ ಪಾರ್ಟ್-2 ಶುರು ಮಾಡಿದೆ. ಇದೀಗ ಶಿಕ್ಷಣ ಇಲಾಖೆ ರಿಲೀಸ್ ಮಾಡಿರೋ ಮಾನದಂಡಗಳು ಇದ್ರೆ ಮಾತ್ರ ಆ ಶಾಲೆಗಳು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಪ್ರತಿ ಜಿಲ್ಲೆಗಳಲ್ಲಿ ಶಾಲೆಗಳ ಮಾಹಿತಿ ಸಂಗ್ರಹಕ್ಕೆ ಬಿಇಓ, ಡಿಡಿಪಿಐಗಳಿಗೆ ಟಾಸ್ಕ್ ನೀಡಲಾಗಿದ್ದು, ಶಾಲೆಗಳನ್ನ ಪಟ್ಟಿ ಮಾಡಿ ಕೊಡುವಂತೆ ಮಾನದಂಡ ರಿಲೀಸ್ ಮಾಡಿದೆ. ಸರ್ಕಾರದ ನಿಯಮ ಪಾಲನೆ ಮಾಡದೇ ಇರೋ ಶಾಲೆಗಳಿಗೆ ಬೀಗ ಬಿಳೋದು ಖಚಿತವಾಗಿದೆ.