ಅಕ್ರಮ ಆಸ್ತಿ ಪ್ರಕರಣದ ಮೇಲೆ ಮಧ್ಯಪ್ರದೇಶದ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು) ರಾಜ್ಯ ಸರ್ಕಾರದ ಗುಮಾಸ್ತರೊಬ್ಬರ ಮನೆಯಲ್ಲಿ ಹುಡುಕಾಟ ನಡೆಸಿ, 85 ಲಕ್ಷ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದೆ. ಆದರೆ ಈ ವೇಳೆ ಗುಮಾಸ್ತ ವಿಷ ಕುಡಿದಿರುವುದಾಗಿ ವರದಿಯಾಗಿದೆ.
ತಿಂಗಳಿಗೆ ಸುಮಾರು 50,000 ರೂ. ವೇತನ ಪಡೆಯುತ್ತಿರುವ ಮೇಲ್ ವಿಭಾಗದ ಗುಮಾಸ್ತ ಹೀರೋ ಕೇಸ್ವಾನಿ ಅವರ ನಿವಾಸದಲ್ಲಿ ನಡೆಸಿದ ಶೋಧದ ವೇಳೆ, ಇಒಡಬ್ಲ್ಯು ತಂಡ ಕೋಟ್ಯಂತರ ರೂ. ಮೌಲ್ಯದ ಹಲವಾರು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ