ಸರ್ಕಾರ ಪ್ರಮುಖ ಹುದ್ದೆಗಳಲ್ಲಿದ್ದರೂ ಸೇವಾ ನಿಯಮಗಳನ್ನು ಮೀರಿ ಕಳೆದ ಎರಡು ದಿನಗಳಿಂದ ಹಾದಿರಂಪ ಹಾಗೂ ಬೀದಿ ರಂಪವನ್ನು ಮಾಡಿಕೊಂಡು ಸರ್ಕಾರ ಮಾನವನ್ನು ಹರಾಜು ಹಾಕಿದ್ದ ಐಎಎಸ್‌ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್‌ಅಧಿಕಾರಿ ಡಿ. ರೂಪಾ ರೂಪಾ ಅವರ ಗಂಡ ಮನೀಶ್‌ಮೌದ್ಗಿಲ್‌ಅವರನ್ನೂ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಇಬ್ಬರಿಗೂ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ರೋಹಿಣಿ ಅವರ ಸ್ಥಾನಕ್ಕೆ ಎಚ್.ಬಸವರಾಜೇಂದ್ರ ಅವರನ್ನು ನಿಯೋಜಿಸಿದ್ದು, ರೋಹಿಣಿಯವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ರೂಪಾ ಅವರ ಸ್ಥಾನಕ್ಕೆ ಭಾರತಿ ಅವರನ್ನು ನಿಯೋಜಿಸಿದ್ದು, ರೂಪಾ ಅವರಿಗೂ ಸ್ಥಳ ತೋರಿಸಿಲ್ಲ.