ಸರ್ಬಿಯಾದಲ್ಲಿ ಮತ್ತೆ ಗುಂಡಿನ ದಾಳಿ 8 ಮಂದಿ ಬಲಿ – ಕೇವಲ ಎರಡೇ ದಿನದೊಳಗೆ ನಡೆದಿರುವ 2ನೇ ಗುಂಡಿನ ದಾಳಿ

ಗುರುವಾರ ತಡರಾತ್ರಿ ರಾಜಧಾನಿ ಬೆಲ್‌ಗ್ರೇಡ್‌ನಿಂದ ದಕ್ಷಿಣಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ಮ್ಲಾಡೆನೊವಾಕ್ ಬಳಿ 21 ವರ್ಷದ ಶಂಕಿತ ಯುವಕನೊಬ್ಬ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಾಳಿಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸರ್ಬಿಯಾದಲ್ಲಿ ಇದು ಕೇವಲ ಎರಡೇ ದಿನದೊಳಗೆ ನಡೆದಿರುವ 2ನೇ ಗುಂಡಿನ ದಾಳಿಯಾಗಿದ್ದು, ಕೇವಲ 2 ದಿನಗಳ ಹಿಂದೆ ಬುಧವಾರ ಬೆಲ್‌ಗ್ರೇಡ್‌ನ ವ್ಲಾಡಿಸ್ಲಾವ್ ರಿಬ್ನಿಕಸ್ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯ 13 ವರ್ಷದ ಬಾಲಕನೊಬ್ಬ ತನ್ನ ತಂದೆಯ ಬಂದೂಕನ್ನು ಬಳಸಿ ಗುಂಡಿನ ದಾಳಿ ನಡೆದಿದ್ದ. ಘಟನೆಯಲ್ಲಿ 8 ಮಕ್ಕಳು ಹಾಗೂ ಒಬ್ಬ ಶಾಲೆಯ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಗುಂಡಿನ ದಾಳಿಯ ಬಳಿಕ ದೇಶಾದ್ಯಂತ ಭೀತಿ ಹೆಚ್ಚಾಗಿದ್ದು, ಅಧಿಕಾರಿಗಳು ಬಂದೂಕು ನಿಯಂತ್ರಣಕ್ಕೆ ಕರೆಗಳನ್ನು ನೀಡಿದ್ದಾರೆ. ಜನತೆಯಲ್ಲಿ ಭೀತಿ ಹೆಚ್ಚಿಸಿದೆ.

Leave a Reply

Your email address will not be published. Required fields are marked *