ಸಂಸದ ತೇಜಸ್ವಿ ಸೂರ್ಯ ಅವರು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಕಮಲ ಚಿತ್ರ ಪೇಯಿಂಟ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಂಸದರ ವಿರುದ್ಧ ಬಿಬಿಎಂಪಿ ಗರಂ ಆಗಿದೆ. ಜನವರಿ 31ರಂದು ವೀಡಿಯೋಗಳನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದರ ಬಗ್ಗೆ ಚರ್ಚೆ ಶುರುವಾಗಿದೆ. ತೇಜಸ್ವಿ ಸೂರ್ಯ ಸಂಸದರಾಗಿ ಸಾರ್ವಜನಿಕ ಗೋಡೆಗಳಲ್ಲಿ ಪೇಂಟಿಂಗ್ ಮಾಡಿರೋದರ ಬಗ್ಗೆ ಸರಿ-ತಪ್ಪು ಚರ್ಚೆ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ವಿಶೇಷ ಆಯುಕ್ತ ಜಯರಾಮ್ ರಾಯಪುರ, ದಕ್ಷಿಣ ವಲಯದಲ್ಲಿ ಗೋಡೆ ಮೇಲೆ ಕಮಲ ಚಿತ್ರ ಪೇಂಟಿಂಗ್ ಮಾಡಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಸುಮೋಟೋ ಕೇಸ್ ದಾಖಲು ಮಾಡ್ತೀವಿ. ಯಾರೇ ಆಗ್ಲಿ ಈ ರೀತಿಯ ಕೃತ್ಯ ಮಾಡಿದ್ರೆ ಅದು ಅಫೇನ್ಸ್ ಆಗುತ್ತೆ. ಕೇಸ್ ದಾಖಲು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.