ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ನಾವು ಉತ್ತರ ಕರ್ನಾಟಕದಲ್ಲಿ ಅಧಿವೇಶನ ಮಾಡಲೇಬೇಕೆಂಬ ಒತ್ತಾಯದಿಂದಾಗಿ ಅಧಿವೇಶನ ನಡೆಯುತ್ತಿದೆ. ಬಿಜೆಪಿ ಸರ್ಕಾರ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ಮರೆತಿದ್ದಾರೆ. ಉತ್ತರ ಕರ್ನಾಟಕವನ್ನು ಸರ್ಕಾರ ಮರೆತಿದ್ದು, ಇಲ್ಲಿನ ಪರಿಸ್ಥಿತಿಯನ್ನು ಸಮಸ್ಯೆಗಳನ್ನು ಆಲಿಸಲು ಸರ್ಕಾರ ವಿಫಲವಾಗಿದೆ ಸ್ವಾತಂತ್ರಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದರು. ಕಮೀಷನ್, ಮತದಾರರ ಪಟ್ಟಿ ಹಗರಣ ಯಾವುದೂ ಚರ್ಚೆ ಆಗಬಾರದು ಅಂತ ಬಿಜೆಪಿಯವರು ಇದೀಗ ಸವರ್ಕರ್ ಫೋಟೋ ಹಾಕಿ ವಿವಾದ ಸೃಷ್ಟಿಸುತ್ತಿದ್ದಾರೆ. ಸ್ಪೀಕರ್ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನಿಯರ ಫೋಟೋ ಹಾಕ್ತೀವಿ ಅಂತ ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕೋದು ಗೊತ್ತಾಯಿತು. ಸಾವರ್ಕರ್‌ಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಸಾವರ್ಕರ್ ವಿವಾದಾತ್ಮಕ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು. ಇದೀಗ ಬಿಜೆಪಿ ಅಧಿವೇಶನಕ್ಕೆ ಅಡ್ಡಿ ತರಲು ಹೊರಟಿದೆ ಎಂದು ಚಾಟಿ ಬೀಸಿದ್ದಾರೆ.