ಸಿಎಂ ಜಗನ್ ಕುಟುಂಬಸ್ಥರ ದರ್ಪ, ಜಗನ್‌ ಸಹೋದರಿ ಹಾಗೂ ತಾಯಿ ಇಬ್ಬರು ಪೊಲೀಸರಿಗೆ ಕಪಾಳ ಮೋಕ್ಷ

ಆಂಧ್ರ ಪ್ರದೇಶದಲ್ಲಿ ರಾಜಕೀಯ ಮೇಲಾಟ, ಪ್ರತಿಭಟನೆ ಜೋರಾಗುತ್ತಿದೆ. ಇದರ ಪರಿಣಾಮ ಐಎಎಸ್ ಅಧಿಕಾರಿಗಳು, ಪೊಲೀಸರು ಸಾರ್ವಜನಿಕವಾಗಿ ನೋವು ಅನುಭವಿಸುವಂತಾಗಿದೆ. ಇಂದು ಪೇಪರ್ ಲೀಕ್ ಪ್ರಕರಣ ಕುರಿತು ಪ್ರತಿಭಟನೆ ನಡೆಸಲು ಮುಂದಾದ ವೈಎಸ್ಆರ್ ಪಕ್ಷದ ನಾಯಕಿ, ಸಿಎಂ ಜಗನ್‌ಮೋಹನ್ ರೆಡ್ಡಿ ಸಹದೋರಿ ವೈಎಸ್ ಶರ್ಮಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಶರ್ಮಿಳಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ರಿ ಶರ್ಮಿಳಾ ಭೇಟಿಯಾಗಲು ಆಗಮಿಸಿದ ವಿಜಯಮ್ಮಗೆ ಹಿನ್ನಡೆಯಾಗಿದೆ. ಪೊಲೀಸರು ಪ್ರತಿಭಟನೆಗೆ ಹಾಗೂ ಪುತ್ರಿಯನ್ನು ಭೇಟಿಯಾಗಲು ಅವಕಾಶ ನೀಡಿಲ್ಲ.ಈ ಘಟನೆ ಬೆನ್ನಲ್ಲೇ ಸಿಎಂ ಜಗನ್ ತಾಯಿ ವೈಎಸ್ ವಿಜಯಮ್ಮ, ಮಹಿಳಾ ಪೊಲೀಸ್ ಕಪಾಳಕ್ಕೆ ಭಾರಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಪುತ್ರಿ ಹಾಗೂ ತಾಯಿ ಇಬ್ಬರು ಪೊಲೀಸರಿಗೆ ಕಪಾಳ ಮೋಕ್ಷ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ದರ್ಪ ತೋರಿದ ವೈಎಸ್ ವಿಜಯಮ್ಮ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *