ಸಿಕ್ಕಿಂನ ಪ್ರಸಿದ್ಧ ಪ್ರವಾಸಿ ಸ್ಥಳ ಗ್ಯಾಂಗ್ಟಾಕ್‌ನಲ್ಲಿ ಮಂಗಳವಾರ ಭಾರಿ ಹಿಮಪಾತ ಸಂಭವಿಸಿದೆ. ಇದರಲ್ಲಿ 6 ಮಂದಿ ಸಾವನ್ನಪ್ಪಿದ್ದು, 150 ಮಂದಿ ಹಿಮ ಸಮಾಧಿಯಾಗಿರುವ ಸಾಧ್ಯತೆ ಇದೆ. ಮೃತರಲ್ಲಿ ನಾಲ್ವರು ಪುರುಷರು, ಓರ್ವ ಮಹಿಳೆ ಮತ್ತು ಮಗು ಸೇರಿದೆ. ಗ್ಯಾಂಗ್‌ಟಾಕ್‌ನಿಂದ ನಾಥುಲಾ ಪಾಸ್‌ಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ಮಾರ್ಗದಲ್ಲಿ ಮಧ್ಯಾಹ್ನ 12:20ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಲು ಪಾಸ್ ನೀಡಲಾಗುತ್ತದೆ. ಈ ಪಾಸ್‌ಗಳನ್ನು 13ನೇ ಮೈಲಿಗೆ ನೀಡಲಾಗಿದ್ದರೂ ಪ್ರವಾಸಿಗರು ಅನುಮತಿ ಪಡೆಯದೇ 15ನೇ ಮೈಲಿ ಕಡೆಗೆ ತೆರಳಿದ್ದಾರೆ. 15ನೇ ಮೈಲಿಯಲ್ಲಿಯೇ ಈ ಘಟನೆ ನಡೆದಿದೆ.ಸಿಕ್ಕಿಂನಲ್ಲಿ ಹಿಮಕುಸಿತದ ನಂತರ ಗ್ಯಾಂಗ್ಟಾಕ್ ಮತ್ತು ನಾಥುಲಾವನ್ನು ಸಂಪರ್ಕಿಸುವ ಜವಾಹರಲಾಲ್ ನೆಹರು ರಸ್ತೆಯ 14 ನೇ ಮೈಲಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಿಮದಲ್ಲಿ ಸಿಲುಕಿದ್ದ 22 ಪ್ರವಾಸಿಗರನ್ನು ರಕ್ಷಿಸಲಾಗಿದೆ.ರಸ್ತೆಯಿಂದ ಹಿಮವನ್ನು ತೆರವುಗೊಳಿಸಿದ ನಂತರ ಸಿಕ್ಕಿಬಿದ್ದ 350 ಪ್ರವಾಸಿಗರು ಮತ್ತು 80 ವಾಹನಗಳನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಲಾಗಿರುವ ಪ್ರವಾಸಿಗರನ್ನು ಎಸ್‌ಟಿಎನ್‌ಎಮ್‌ಆಸ್ಪತ್ರೆ ಹಾಗೂ ಗ್ಯಾಂಗ್ಟಕ್‌ನ ಸೆಂಟ್ರಲ್‌ರೆಫರಲ್‌ಆಸ್ಪತ್ರೆಗೆ ದಾಖಲು ಮಾಡಲಾಗಿದೆ.