ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಭೆಯನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ.

ಅಮೆರಿಕದಲ್ಲಿ ಸಾಲದ ಮಿತಿಯನ್ನು ತೆರವುಗೊಳಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಹಿನ್ನೆಲೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಹಾಗೂ ಪಪುವಾ ನ್ಯೂಗಿನಿಯಾ ಭೇಟಿಗಳನ್ನು ರದ್ದುಗೊಳಿಸಿದ್ದಾರೆ. ಆದರೂ ಈ ವಾರಾಂತ್ಯ ಅವರು ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕ್ವಾಡ್ ಶೃಂಗಸಭೆಯ ರದ್ದು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಮುಂದಿನ ವಾರ ಸಿಡ್ನಿಯಲ್ಲಿ ಕ್ವಾಡ್ ನಾಯಕರ ಸಭೆ ನಡೆಯುವುದಿಲ್ಲ. ಬದಲಿಗೆ ನಾವು ಜಪಾನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಕ್ವಾಡ್ ನಾಯಕರೊಂದಿಗೆ ಆ ಚರ್ಚೆಯನ್ನು ನಡೆಸುತ್ತೇವೆ ಎಂದಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿದ್ದ ಚೀನಾದ ಪ್ರಭಾವದ ಹಿನ್ನೆಲೆ 2017ರಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ಒಕ್ಕೂಟವನ್ನು ರಚಿಸಲಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ 7 ದೇಶಗಳ ಜಿ7 ನ ಸದಸ್ಯತ್ವ ಹೊಂದಿಲ್ಲ. ಆದರೂ ಮೇ 19 ರಿಂದ ಮೇ 21 ರವರೆಗೆ ಜಪಾನ್‌ನ ಹಿರೋಶಿಮಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲು ಇವೆರಡು ದೇಶಗಳನ್ನು ಆಹ್ವಾನಿಸಲಾಗಿದೆ.

Leave a Reply

Your email address will not be published. Required fields are marked *