ಗಣಿ ನಾಡು ಬಳ್ಳಾರಿಯಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕುರುಬರ ಹಾಸ್ಟೆಲ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಶ್ರೀರಾಮುಲು ಕುರುಬ ಸಮುದಾಯ ಹಾಗೂ ಸಿದ್ದರಾಮಯ್ಯ ವಿರೋಧಿಯಲ್ಲ. ನೋಡುವುದಕ್ಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಎನೋ ಮಾಡಿಕೊಳ್ಳುತ್ತೇವೆ . ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ದರು ಎನ್ನುವುದನ್ನು ಹೋಗಿ ಅವರನ್ನೇ ಕೇಳಿ. ಅದೆಲ್ಲಾ ನಿಮಗೆ ಗೊತ್ತಾಗಲ್ಲ. ಮುಂದೊಂದು ದಿನ ನಾನು ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಬರುತ್ತೇವೆ. ಸಿದ್ದರಾಮಯ್ಯಗೆ ಭಗವಂತ ಆರ್ಶಿವಾದ ಮಾಡಿದರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೇ ನಾನು ಮುಖ್ಯಮಂತ್ರಿ ಆಗುವೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಎರುವ ಆಸೆಯನ್ನು ಶ್ರೀರಾಮುಲು ಹೊರಹಾಕಿದ್ದಾರೆ.