ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಹಿಂದೂಗಳಲ್ಲಿಯೂ ಸಾಕಷ್ಟು ಜನರು ಮಾಂಸಾಹಾರಿಗಳಿದ್ದಾರೆ. ಹಿಂದೂ ದೇವರಿಗೂ ಮಾಂಸಾಹಾರ ಪ್ರಸಾದ ಮಾಡ್ತಾರೆ ಅದರಲ್ಲೇನೂ ತಪ್ಪಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಹಾರ ಸೇವನೇ ಮಾಡಿ ದೇವಸ್ಥಾನ ಪ್ರವೇಶಿಸಿರುವುದು ತಪ್ಪಲ್ಲ, ಚರ್ಚೆಯ ವಿಷಯವೇ ಅಲ್ಲ, ಆದರೆ ಬಿಜೆಪಿಯವರಿಗೆ ಚರ್ಚೆಗೆ ಬೇರೆ ವಿಷಯವೇ ಇಲ್ಲ. ಬಿಜೆಪಿಯವರು ಇಂತಹ ವಿಷಯ ಬಿಟ್ಟು ಸಾವರ್ಕರ್ ವಿಷಯದ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.