ಸಿಲಿಗುರಿಯಿಂದ ಉತ್ತರ ಬಂಗಾಳ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆ 1206 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ ಈ ಹೆದ್ದಾರಿಯ ಶಂಕು ಸ್ಥಾಪನೆಗಾಗಿ ನಿತಿನ್ ಗಡ್ಕರಿ ಆಗಮಿಸಿದ್ದರು. ಆಗಮಿಸಿದ ನಿತಿನ್ ಗಡ್ಕರಿ ಆರೋಗ್ಯ ಕ್ಷೀಣಿಸಿದೆ. ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ವೇದಿಕೆಯಲ್ಲೇ ನಿತಿನ್ ಗಡ್ಕರಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ವೈದ್ಯರ ತಂಡ ವೇದಿಕೆಯ ಹಿಂಬಾಗದಲ್ಲಿ ಗಡ್ಕರಿಗೆ. ಚಿಕಿತ್ಸೆ ನೀಡಿದೆ. ಸದ್ಯ ನಿತಿನ್ ಗಡ್ಕರಿ ಚೇತರಿಸಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ನೀರಜ್ ಜಿಂಬಾ ಹೇಳಿದ್ದಾರೆ.