ಸುಡಾನ್ ಸೇನೆ ಹಾಗೂ ಸುಡಾನ್‌ನ ಅರೆಸೇನಾ ಪಡೆಯ ನಡುವೆ ಕಳೆದ 10 ದಿನಗಳಿಂದ ಭೀಕರ ಹಿಂಸಾಚಾರ ನಡೆಯುತ್ತಿದೆ. ಪರಿಸ್ಥಿತಿ ಹಿಡಿತಕ್ಕೆ ಸಿಗದ ಕಾರಣ ಕೋಟ್ಯಂತರ ಜನರು ಅಪಾಯದಲ್ಲಿದ್ದಾರೆ. ಭಾರತೀಯ ಸೇನೆ ಹಾಗೂ ಭಾರತ ಸರ್ಕಾರ ನಮ್ಮವರ ರಕ್ಷಣೆಗೆ ದೊಡ್ಡ ಪಡೆಯನ್ನೇ ಅಲ್ಲಿಗೆ ಕಳುಹಿಸಿದೆ. ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆಯ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿಕೊಂಡಿದೆ. ಹೀಗಾಗಿ ಸೌದಿ ಅರೇಬಿಯಾ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. 500ಕ್ಕೂ ಹೆಚ್ಚು ಭಾರತೀಯರು ಸುಡಾನ್ ಬಂದರನ್ನ ತಲುಪಿದ್ದು, ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ. 72 ಗಂಟೆಗಳ ಕಾಲ ಘೋಷಣೆಯಾಗಿರುವ ಕದನ ವಿರಾಮ ಘೋಷಿಸಲಾಗಿದೆ ಹೀಗಾಗಿ ಭಾರತೀಯರ ರಕ್ಷಣೆಗೆ ಸೂಕ್ತ ಸಮಯ ಸಿಕ್ಕಂತಾಗಿದೆ ವಿರಾಮಕ್ಕೆ ಕೌಂಟ್‌ಡೌನ್ ಶುರುವಾಗಿರುವುದು ಆತಂಕ ಹೆಚ್ಚಿಸಿದೆ.