ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಜನ ಬ್ಯಾಂಕುಗಗಳಿಗೆ ಭೇಟಿ ನೀಡಿ ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು 2000 ರೂಪಾಯಿ ಮುಖಬೆಲೆಯ ನೋಟು ಬದಲಾಯಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಿಕೊಳ್ಳಲು ಯಾರೂ ಆತುರಪಡಬಾರದು ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸೆಪ್ಟೆಂಬರ್ 30 ರ ನಂತರವೂ ನೋಟುಗಳು ಮಾನ್ಯವಾಗಿರುತ್ತವೆ 2000 ರೂಪಾಯಿ ನೋಟುಗಳನ್ನು ಹಿಂತಿರುಗಿಸುವುದು ಮುಖ್ಯ ಆದರೆ ಅವಸರ ಬೇಡ. ಅದಕ್ಕಿರುವ ಕಾಲಾವಕಾಶವನ್ನು ಬಳಸಿಕೊಳ್ಳಿ, ಅಲ್ಲಿವರೆಗೂ ನೋಟು ಚಲಾವಣೆಯಲ್ಲಿರುತ್ತದೆ.ಎಂದು ಅವರು ಭರವಸೆ ನೀಡಿದರು. ಸಾರ್ವಜನಿಕರಿಗೆ ನಾಲ್ಕು ತಿಂಗಳ ಕಾಲಾವಕಾಶ ಇರುವುದರಿಂದ ತಕ್ಷಣ ಬ್ಯಾಂಕ್‌ಗಳಿಗೆ ಮುಗಿಬೀಳುವ ಅಗತ್ಯವಿಲ್ಲ ಎಂದಿದ್ದಾರೆ. ಆರ್‌ಬಿಐ ಗವರ್ನರ್ ಪ್ರಕಾರ, 2000 ನೋಟುಗಳ ವಿನಿಮಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಎಲ್ಲಾ ಸ್ಥಳಗಳಲ್ಲಿ ಕರೆನ್ಸಿಯ ಸಾಕಷ್ಟು ದಾಸ್ತಾನು ಈಗಾಗಲೇ ಲಭ್ಯವಿದೆ.