ಸೊರಬದ ಅಖಾಡದಲ್ಲಿ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವಿನ ಫೈಟ್ ಈ ಬಾರಿ ಮತ್ತಷ್ಟು ಜೋರಾಗುವ ಸಾಧ್ಯತೆ

ರಾಜ್ಯ ರಾಜಕಾರಣದಲ್ಲಿ ಈ ಬಾರಿ ಕುಟುಂಬ ರಾಜಕಾರಣದ ಇಂಟರ್ನಲ್ ಫೈಟ್ ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಹಾಸನದಲ್ಲಿ ದಾಯಾದಿ ಕಲಹ, ಬಳ್ಳಾರಿಯಲ್ಲಿ ಸಹೋದರರ ಸವಾಲು ಶಿವಮೊಗ್ಗದಲ್ಲೂ ಸಹೋದರ ಸವಾಲು ಫಿಕ್ಸ್ ಆಗಿದೆ. ಶಿವಮೊಗ್ಗದಲ್ಲಿ ಸಹೋದರರ ಸವಾಲು ಈ ಸಲವೂ ಅದೇ ಖದರ್‌ನಿಂದ ನಡೆಯುವುದು ಫಿಕ್ಸ್ ಎಂಬಂತಾಗಿದೆ. ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವೆ ಈ ಬಾರಿ ಮತ್ತೆ ನಿರ್ಣಾಯಕ ಕದನ ಸೊರಬದಲ್ಲಿ ಫಿಕ್ಸ್ ಆಗಿದೆ. ಸೋಲಿನ ಕಹಿಯಿಂದ ಹೊರಬಂದು ಅಣ್ಣನಿಗೆ ಸೋಲಿನ ರುಚಿ ತೋರಿಸುವುದು ಮಧು ಬಂಗಾರಪ್ಪ ಲೆಕ್ಕಾಚಾರವಾದರೆ, ಈ ಬಾರಿಯೂ ಗೆಲುವು ಮುಂದುವರಿಸಿ ಸಹೋದರ ಮಧು ಬಂಗಾರಪ್ಪನನ್ನು 2ನೇ ಬಾರಿಯೂ ಸೋಲಿಸುವುದು ಕುಮಾರ ಬಂಗಾರಪ್ಪ ಲೆಕ್ಕಾಚಾರ ಎನ್ನಲಾಗಿದೆ.

Leave a Reply

Your email address will not be published. Required fields are marked *