ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಬರವಣಿಗೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಬರವಣಿಗೆ ವಿರುದ್ಧ ಪರಮೇಶ್ವರ್ ದೂರು ನೀಡಿದ್ದಾರೆ. ಫೇಸ್‍ಬುಕ್ ಮತ್ತು ಯೂಟ್ಯೂಬ್ ನಲ್ಲಿ ತಮ್ಮ ಮತ್ತು ತಮ್ಮ ಮಗಳ ಬಗ್ಗೆ ವೀಡಿಯೋ ಹಾಕಿ ಅವಹೇಳನ ಮಾಡಿದ್ದು, ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ವೀಡಿಯೋ ಅಪ್ಲೋಡ್ ಮಾಡಲಾಗ್ತಿದೆ. ಅಪ್ಲೋಡ್ ಮಾಡುವುದರ ಜೊತೆಗೆ ಪರಮೇಶ್ವರ್ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ. ರಾಜಕೀಯವಾಗಿ ತಗ್ಗಿಸಲು ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡಿದ್ದಾರೆ. ಅಂತಾ ಪೊಲೀಸ್ ಠಾಣೆಗೆ ತಮ್ಮ ಆಪ್ತನ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *