ವಿಧಾನಸಭೆ ಚುನಾವಣೆಗೆ ಬಿಜೆಪಿಯಲ್ಲಿ ಭರ್ಜರಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಬಿಜೆಪಿಗೆ ಈ ಬಾರಿ ಹಳೇ ಮೈಸೂರು ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ದೊಡ್ಡ ಸವಾಲು. ವೀಕ್ ಇರುವ 2 ಭಾಗಗಳಲ್ಲೂ ಟಾರ್ಗೆಟ್ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದೆ.ಹಳೇ ಮೈಸೂರು ಭಾಗದಲ್ಲಿ ಗೆಲ್ಲುವುದಕ್ಕೆ, ಪಕ್ಷದ ಬಲವರ್ಧನೆಗೆ ಪಕ್ಕಾ ರೂಟ್‍ಮ್ಯಾಪ್ ಹಾಕಿ, ಒಂದಷ್ಟು ಟಾಸ್ಕ್‌ಗಳನ್ನು ಅಮಿತ್ ಶಾ ಕೊಟ್ಟು ಹೋಗಿದ್ದರು.ಇನ್ನು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುರುವಾರದಿಂದ ಮೋದಿ ಅಬ್ಬರ ಪ್ರಾರಂಭವಾಗಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದು, ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಕಲ್ಯಾಣ ಭಾಗದಲ್ಲಿ ಕೊಂಚ ದುರ್ಬಲ ಇರುವ ಬಿಜೆಪಿಯನ್ನು ಸ್ಟ್ರಾಂಗ್ ಮಾಡಲು ಮೋದಿ ಮೋಡಿ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಪಡೆ ಇದೆ. ಕಲ್ಯಾಣ ಭಾಗದಿಂದಲೇ ಕಲ್ಯಾಣ ಪರ್ವಕ್ಕೆ ಮೋದಿ ನಾಂದಿ ಹಾಡ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಲಬುರಗಿಯಲ್ಲಿ 52 ಸಾವಿರ ಬಂಜಾರ ಸಮುದಾಯದವರಿಗೆ ಹಕ್ಕು ಪತ್ರ ಕೊಡುವ ಮೂಲಕ ಬಿಜೆಪಿಗೆ ಆ ಸಮುದಾಯದ ಒಲವು ಸಿಗೋದು ಪಕ್ಕಾ ಎನ್ನಲಾಗುತ್ತಿದೆ. ಮೋದಿಯವರು ನೀರಾವರಿ ವಲಯಕ್ಕೆ ಬಿಜೆಪಿಯು ಹೆಚ್ಚಿನ ಆದ್ಯತೆ ಕೊಟ್ಟಿದೆ ಎಂಬ ಸಂದೇಶ ಸಾರಲಿದ್ದಾರೆ. ಇದರ ಮೂಲಕ ಆ ಭಾಗದ ರೈತರ ಒಲವು ಗಳಿಸಲು ಬಿಜೆಪಿ ಕಸರತ್ತು ನಡೆಸಿದೆ.