ಇಷ್ಟು ದಿನ ತಣ್ಣಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದಬಳಿಕ ಹುಬ್ಬಳ್ಳಿಯಲ್ಲೂ ವಿವಾದ ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೋರಿ ಗಜಾನನ ಮಂಡಳಿಯೊಂದು ಮನವಿ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ಈದ್ಗಾ ವಿವಾದ ದಶಕಗಳಕಾಲಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಹುಬ್ಬಳ್ಳಿಯ ಈದ್ಗಾ ಮೈದಾನದಕ್ಕಾಗಿ 90ರ ದಶಕದಲ್ಲಿ ನಡೆದ ಹೋರಾಟದಿಂದ ಘಟಾನುಘಟಿ ನಾಯಕರಗಳು ಅಧಿಕಾರದ ಗದ್ದುಗೆ ಏರಿದರೆ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ, ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನದಹೋರಾಟ ಅಷ್ಟೊಂದು ರಣ ರೋಚಕ ಇತಿಹಾಸವನ್ನು ಹೊಂದಿದೆ.