ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಮೊದಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿತು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೆಣ್ಣಮಕ್ಕಳು ವಿದೇಶಕ್ಕೆ ತೆರಳುವುದನ್ನು ಅಫ್ಘಾನಿಸ್ತಾನದ ತಾಲಿಬಾನ್‌ಸರ್ಕಾರ ನಿರ್ಬಂಧಿಸಿದೆ. ಕಜಾಕಿಸ್ತಾನ ಹಾಗೂ ಕತಾರ್‌ದೇಶಗಳಿಗೆ ಸಾಮಾನ್ಯವಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದರು. ಇದಕ್ಕೆ ತಾಲಿಬಾನ್‌ಸರ್ಕಾರ ನಿಷೇಧ ಹೇರಿದ್ದು ಕೇವಲ ಗಂಡುಮಕ್ಕಳು ಮಾತ್ರವೇ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಹುದು ಎಂದು ಹೇಳಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬದುಕು ಇನ್ನಷ್ಟು ನರಕವಾಗುವುದು ನಿಶ್ಚಿತವಾಗಿದೆ.