ಬೆಂಗಳೂರು ನಗರದಲ್ಲಿರುವ ಗುಂಡಿ ಮುಚ್ತೀವಿ ಮುಚ್ತೀವಿ ಅಂತ ಬಿಬಿಎಂಪಿ ಹೇಳಿದ್ದೆ ಬಂತು. ಜನರ ತೆರಿಗೆ ದುಡ್ಡು ನೀರಲ್ಲಿ ಹೋಮ ಮಾಡಿದೆ. ಗುಂಡಿಗಳಿಗೆ ಮಾತ್ರ ಕಡಿವಾಣವೇ ಬೀಳ್ತಿಲ್ಲ. ಈ ಮಧ್ಯೆ ಕಮಿಷನರ್ ಜನರಿಗೆ ಹೊಸ ವರ್ಷದ ಮೊದಲ ಗಿಫ್ಟ್ ನೀಡೋಕೆ ಮುಂದಾಗಿದ್ದಾರೆ ಹೊಸ ವರ್ಷಕ್ಕೆ ನೂತನ ಡೆಡ್‍ಲೈನ್ ಕೊಟ್ಟಿದ್ದಾರೆ. ಡಿ.31ರ ಒಳಗೆ ಎಲ್ಲಾ ಗುಂಡಿ ಮುಚ್ಚುವಂತೆ ಸೂಚಿಸಿದ್ದಾರೆ. ಗುಂಡಿ ಗಂಡಾಂತರಕ್ಕೆ ಮೂಲ ಕಾರಣವೇ BWSSB, BESCOM ಎಂದು ಬಿಬಿಎಂಪಿ ದೂರುತ್ತಿದೆ. ನಾವೆಲ್ಲಾ ಕಾಮಗಾರಿ ಮಾಡ್ತಾ ಕಂಪ್ಲೀಟ್ ಮಾಡ್ತಿದ್ರೆ, ಈ ಎರಡೂ ಸಂಸ್ಥೆಗಳು ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದಾರೆ. ಈ ಸಂಸ್ಥೆಗಳಿಗೆ ನಮ್ಮ ಬಿಬಿಎಂಪಿ ಇಂಜಿಯರ್‌ಗಳೇ ಅನುಮತಿ ಕೊಡಬೇಕು. ಕೊಟ್ಟ ಬಳಿಕ ಕಾಮಗಾರಿ ಮುಗಿದ ಮೇಲೆ ನಮ್ಮ ಅಧಿಕಾರಿಗಳೇ ರಸ್ತೆಗಳನ್ನು ಮುಂದೆ ನಿಂತು, ಆ ಸಂಸ್ಥೆಗಳಿಂದಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಹಾಗೇನಾದ್ರು ಮಾಡಲಿಲ್ಲ ಅಂದ್ರೆ ನಮ್ಮ ವಾರ್ಡ್ ಹಾಗೂ ಮೇಜರ್ ರೋಡ್ ಇಂಜಿನಿಯರ್‌ಗಳ ಸಂಬಳವನ್ನು ಕಡಿತ ಮಾಡಿ ರಸ್ತೆ ದುರಸ್ತಿ ಮಾಡ್ತೇವೆ ಎಂದು ಕಮಿಷನರ್ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.